ಸೇಡಂ ತಾಲೂಕಿನ ಹಂಗನಳ್ಳಿ ರಸ್ತೆಯ ನೃಪತುಂಗ ನಗರದಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಮಳಖೇಡ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದ್ರಿ ಉದ್ಘಾಟಿಸಿದರು. ಶಿವನಗೌಡ ಪಾಟೀಲ್, ಸೂರ್ಯಕಾಂತ ಹಂಗನಳ್ಳಿ, ಚನ್ನವಿರ ರ್ನಿಣಿ ಇದ್ದರು.
- ಮುಡುಬಿ ಗುಂಡೇರಾವ್ ಶ್ಲಾಘನೆ
- ಚನ್ನಬಸವ ಶಿವಯೋಗಿಗಳ ಜಾತ್ರೆ, ಧರ್ಮ ಸಭೆ
ಸೇಡಂ : ಧರ್ಮ, ಅಧ್ಯಾತ್ಮ ೇತ್ರಕ್ಕೆ ಹಾರಕೂಡ ಮಠದ ಕೊಡುಗೆ ಅಪಾರವಾಗಿದೆ. ಶ್ರೀ ಚನ್ನಬಸವ ಶಿವಯೋಗಿಗಳು ನುಡಿದಂತೆ ನಡೆದ ಶರಣರಾಗಿದ್ದರು ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಬಣ್ಣಿಸಿದರು.
ಹಂಗನಳ್ಳಿಯ ನೃಪತುಂಗ ನಗರದಲ್ಲಿ ವೀರಶೈವ ಸೇವಾ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆಯಲ್ಲಿ ಉಪನ್ಯಾಸ ನೀಡಿ, ಜಾತ್ರೆ, ಉತ್ಸವಗಳು ನಮ್ಮ ಸಂಸತಿಯ ಜೀವಾಳವಾಗಿವೆ. ಮನಸ್ಸಿನ ನೆಮ್ಮದಿಗಾಗಿ ಭಕ್ತಿಯ ತಾಣಗಳ ದರ್ಶನ ಪಡೆಯಬೇಕು. ಶರಣರು, ಸಂತರು ಬಾಳಿ ಬೆಳಗಿದ ಪುಣ್ಯಭೂಮಿ ನಮ್ಮದಾಗಿದೆ ಎಂದರು.
ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿ, ದೇವರಲ್ಲಿ ಭಕ್ತಿಯಿಟ್ಟು ಮಾಡುವ ಕಾಯಕವು ಶ್ರೇಷ್ಠವಾಗುತ್ತದೆ. ಪುಣ್ಯದ ಕಾರ್ಯಗಳನ್ನು ಪ್ರತಿ ಕ್ಷಣವು ಮಾಡುತ್ತಾ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಳಖೇಡ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದ್ರಿ ನೇತೃತ್ವವಹಿಸಿದ್ದರು.
ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ್ ಮರಗೋಳ, ಅಲ್ಟ್ರಾಟೆಕ್ ಕಂಪನಿ ಅಧ್ಯಕ್ಷ ಉದಯ ಪವಾರ್, ಪ್ರಮುಖರಾದ ಅಶೋಕ ಮೆನೆನ್, ಚೇತನ, ವೀರಯ್ಯ ಸ್ವಾಮಿ ಊಡಗಿ, ಚನ್ನವಿರ ಸೂಲಹಳ್ಳಿ, ಸೂರ್ಯಕಾಂತ ಮಾಸ್ತರ್ ಗುಗ್ಗರಿ, ಶಂಕರ ಸುಲೇಗಾಂವ್, ವೀರಣ್ಣ ಸಜ್ಜನಶೆಟ್ಟಿ, ಲೋಕೇಶ್ವರ ಪಾಟೀಲ್, ಹಣಮಂತರಾವ ಸಾಹು, ಶಾಂತಾಬಾಯಿ ಬಿರಾದಾರ, ಸಂತೋಷ ಭಾಂಜಿ, ನಾಗರಾಜ ಪಾಗಾ, ಬಸವರಾಜ ಕುಂಬಾರ, ಅಮೃತರಾವ ಪಾಟೀಲ್, ಶರಣಕುಮಾರ ಪಾಟೀಲ್, ರುದ್ರಗೌಡ ದಿಗ್ಗಾಂವ್, ಕಂಟೆಪ್ಪ ಇವಣಿ, ಪ್ರಶಾಂತ ಹುನಗುಂದಾ, ಮಹಾದೇವ ಸಜ್ಜನ್, ನಾಗೇಂದ್ರ ಬಿರಾದಾರ, ಜಗನ್ನಾಥ ಮಜ್ಜಗಿ, ಶರಣಗೌಡ ಹಂಗನಳ್ಳಿ, ರವಿ ಚವ್ಹಾಣ ಇತರರಿದ್ದರು.