ಆಳಂದ ತಾಲೂಕಿನ ಬಾಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರರ ಆಧ್ಯಾತ್ಮಿಕ ಪ್ರವಚನ ಸಮಾರಂಭದಲ್ಲಿ ಭಾಗಿಯಾಗಿರುವ ಅಸಂಖ್ಯಾತ ಭಕ್ತರು.
- ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನುಡಿ
- ಬಾಳಿಯಲ್ಲಿ ಅಧ್ಯಾತ್ಮ ಪ್ರವಚನ
ಆಳಂದ: ಮನುಷ್ಯನ ಜೀವನದಲ್ಲಿ ಸುಖ, ದು@ಖ ಸಹಜವಾದ ಅನುಭವಗಳಾಗಿವೆ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಬಾಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ರಥೋತ್ಸವ ಮೈದಾನದಲ್ಲಿ ಹಮ್ಮಿಕೊಂಡಿರುವ ಅಧ್ಯಾತ್ಮ ಪ್ರವಚನದಲ್ಲಿ ಭಾನುವಾರ ಅನುಗ್ರಹ ಸಂದೇಶ ನೀಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಸುಖವನ್ನು ಪಡುತ್ತಾ ದು@ಖವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಿಜವಾದ ಸುಖ ಹೊರಗಿನ ಸಂಪತ್ತು, ಸ್ಥಾನಮಾನ ಅಥವಾ ವೈಭವದಲಿಲ್ಲ. ಅದು ಮನುಷ್ಯನ ಮನಸ್ಸಿನ ಶಾಂತಿ ಮತ್ತು ಆತ್ಮ ತೃಪ್ತಿಯಲ್ಲಿದೆ. ಆದಿ ಮಾನವನಿಂದ ಹಿಡಿದು ಇಂದಿನ ಆಧುನಿಕ ಮಾನವನವರೆಗೂ ನಮ್ಮಲ್ಲಿ ವಿಶೇಷ ಗುಣವಿದೆ. ಅದು ಸಂಶೋಧನಾತ್ಮಕ ಬುದ್ಧಿಯಾಗಿದೆ. ಮಾನವ ತಾಯಿ ಗರ್ಭದಿಂದ ಹೊರ ಬಂದು, ಭೂಗರ್ಭ ಸೇರುವವರಿಗೆ ಸಂಶೋಧನೆಗಳು ಮಾಡುತ್ತಾ ಇರುತ್ತಾನೆ ಎಂದರು.
ಮನೆಯ ಅಂಗಳದಿಂದ ಮಂಗಳದವರೆಗೆ, ಅಂದದಿಂದ ಚಿನ್ನದವರೆಗೆ, ಗುಹೆಯಿಂದ ಗೂಗಲ್ವರೆಗೆ ಸಂಶೋಧನೆ ಮಾಡುತ್ತಾ ಇದ್ದಾನೆ. ನಾಗರಿಕತೆ, ಸಂಸತಿ, ವಿಾನ, ತಂತ್ರಾನ, ಮಾನವನ ಸಂಶೋಧನೆಯಿಂದ ಉದುರಿದ ತುಣುಕುಗಳಾಗಿವೆ. ದು@ಖದ ಮೂಲ ಕಾರಣ ಬಯಕೆ, ಇಚ್ಛೆಯಾಗಿದೆ. ದುಯೋರ್ಧನನ ಹತ್ತಿರ ಪಾಂಡವರು ಬಂದು 5 ಹಳ್ಳಿ ಕೊಡಪ್ಪ ಸಾಕು ಎಂದು ಕೇಳಿದಾಗ ಒಂದು ಸೂಜಿಯಷ್ಟು ಸ್ಥಳ ಕೊಡಲ್ಲ ಎಂದವ ಕೊನೆಗೆ ಆತನೇ ಉಳಿಯಲಿಲ್ಲ. ಆಳಬೇಕೆಂಬ ಧರ್ಮ ಆಳಲಿಕ್ಕೆ ಆಗಲಿಲ್ಲ. ಶ್ರೀರಾಮನ ಪಟ್ಟಾಭಿಷೇಕ ಎಲ್ಲರ ಆಸೆ, ಆಪೇೆಯಾಗಿತ್ತು. ಸಿಂಹಾಸನದ ಮೇಲೆ ರಾಮನಿಗೆ ಕೂರಲು ಆಗಲಿಲ್ಲ, ಆದರೆ ಕಟ್ಟಿಗೆಯ ಪಾದರಕ್ಷೆಗಳು ಸಿಂಹಾಸನವೇರಿ ಆಳಿದವು ಎಂದು ವಿವರಿಸಿದರು.
ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಆಳಂದ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ನಡೆಸಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ಕಡಗಂಚಿ ಗ್ರಾಮಕ್ಕೆ ಆಗಮಿಸಿದ ಶ್ರೀಗಳು, 6 ಗಂಟೆಗೆ ಶ್ರೀ ಶಾಂತಲಿಂಗೇಶ್ವರ ಮಠದಲ್ಲಿ ಸದ್ಭಾವನಾ ಯಾತ್ರೆ ಶುರು ಮಾಡಿದರು. ಪ್ರಮುಖ ರಸ್ತೆಗಳ ಸಾಗಿ ಅಸಂಖ್ಯಾತ ಜನರನ್ನು ಆಶೀರ್ವದಿಸಿದರು. ಜನರು ಗುರುಗಳನ್ನು ಭಕ್ತಿಯಿಂದ ಸ್ವಾಗತಿಸಿ ಆಶೀರ್ವಾದ ಪಡೆದರು. ಮಂಗಳವಾರ ಬೆಳಗ್ಗೆ 6ಕ್ಕೆ ಹಳ್ಳಿಸಲಗರ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ನಡೆಯಲಿದೆ.