ಕಲಬುರಗಿ: ( ಚಿತ್ತಾಪುರ) ತಾಲೂಕಿನ ಭೀಮಾ ನದಿ ದಂಡೆಯ ಮೇಲಿರುವ ಶ್ರೀಕ್ಷೇತ್ರ ಮಾರಡಗಿಯಲ್ಲಿ ಏಪ್ರಿಲ್ 2 ರಂದು ಹನುಮ ಜಯಂತಿ ಉತ್ಸವ ನಡೆಯಲಿದೆ..ಗ್ರಾಮದ ಶ್ರೀ ಮಾರುತೇಶ್ವರ ಸನ್ನಿಧಿಯಲ್ಲಿ ಉತ್ಸವ ನಡೆಯಲಿದ್ದು ಇಡೀ ಗ್ರಾಮಸ್ಥರು ಜಯಂತಿಯನ್ನ ಸಡಗರ ಸಂಭ್ರಮದಿಂದ ಆಚರಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ..ಬೆಳಿಗ್ಗೆ 7 ಕ್ಕೆ ಶಿಖರ ಧ್ವಜಾರೋಹಣ 9 ಗಂಟೆಗೆ ಅಭಿಷೇಕ 10 ಗಂಟೆಗೆ ಹನುಮನ ಪಲ್ಲಕ್ಕಿ ಗಂಗಾಸ್ಥಳಕ್ಕೆ ಹೋಗಿ ಗ್ರಾಮ ಪ್ರದಕ್ಷಿಣೆ ಮೂಲಕ ದೇಗುಲಕ್ಕೆ ಆಗಮಿಸುವುದು. ವಿಶೇಷ ಅಂದ್ರೆ 11 ಗಂಟೆಯಿಂದ ಪವಮಾನ ಹೋಮ ನಂತ್ರ ತೊಟ್ಟಿಲೊತ್ಸವ ಜರುಗುವುದು..ಮಧ್ಯಾನ 1 ಗಂಟೆ ನಂತ್ರ ಮಹಾ ನೈವೇದ್ಯ ಹಾಗು ಪ್ರಸಾದ ವಿತರಣೆ ನಡೆಯಲಿದೆ ಅಂತ ದೇವಸ್ಥಾನದ ಮೂಲಗಳು ತಿಳಿಸಿವೆ...