Handwritten copyright is not issued. 
ರಾಜ್ಯ

ಕೈಬರಹದ ಹಕ್ಕುಪತ್ರ ನೀಡಲ್ಲ

ತುಮಕೂರು ಡೆಸ್ಕ್
ಶಿರಾ: ನಗರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ಹಕ್ಕು ಪತ್ರಗಳನ್ನು ರಾಜೀವ್​ ಗಾಂಧಿ ವಸತಿ ನಿಗಮದಿಂದ ನೀಡಲಾಗುವುದು. ನಗರಸಭೆಯಿಂದ ಯಾವುದೇ ಕೈಬರಹದ ಹಕ್ಕು ಪತ್ರಗಳನ್ನು ನೀಡಲಾಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಿ ಎಂದು ಪೌರಾಯುಕ್ತ ರುದ್ರೇಶ್​ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯ ರಾಧಾಕೃಷ್ಣ ಅವರು ಸ.ನಂ.118ರಲ್ಲಿ ಮಂಜುನಾಥ್​ ಎಂಬ ಹೆಸರಿಗೆ 2023ರ ಮೇ 30ರಂದು ಸಹಿ ಮಾಡಿರುವಂತೆ ನಕಲಿ ಹಕ್ಕು ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪತ್ರಿಕ್ರಿಯಿಸಿದ ಪೌರಾಯುಕ್ತ ರುದ್ರೇಶ್​, ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಶ್ರೀದಲ್ಲಿಯೇ ಆಯ್ಕೆ ಪಟ್ಟಿಯನ್ನು ನಗರಸಭೆ ಕಚೇರಿಯ ನಾಮಫಲಕದಲ್ಲಿ ಪ್ರದರ್ಶಿಸಲಾಗುವುದು. ಇದಕ್ಕೆ ಸಾರ್ವಜನಿಕರಿಂದ ಯಾವುದಾದರೂ ಆೇಪಣೆ ಇದ್ದರೆ ಸಲ್ಲಿಸಬಹುದು. ಆ ನಂತರ ಹಕ್ಕು ಪತ್ರಕ್ಕಾಗಿ ರಾಜೀವ್​ ಗಾಂಧಿ ವಸತಿ ನಿಗಮದ ವೆಬ್​ಸೈಟ್​ನಲ್ಲಿ ಎಲ್ಲ ದಾಖಲೆಗಳನ್ನು ನಮೂದಿಸಲಾಗುವುದು. ಆ ನಂತರ ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ, ರಾಜೀವ್​ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರು ಅನುಮೋದಿಸಿದ ನಂತರ ಸರ್ಕಾರದಿಂದ ಹಕ್ಕು ಪತ್ರ ಬಿಡುಗಡೆಯಾಗುತ್ತದೆ. ಆದ್ದರಿಂದ ಯಾರೂ ಸಹ ಕೈ ಬರಹದ ಹಕ್ಕು ಪತ್ರ ನೀಡುವುದಾಗಿ ತಿಳಿಸಿದರೆ ನಗರಸಭೆ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಕೃಷ್ಣಪ್ಪ, ನಿವೇಶನಕ್ಕೆ ಆಯ್ಕೆಯಾದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಎಂದು ತಿಳಿಸಿದರು.
ಶಿರಾ ನಗರದಲ್ಲಿ ನಡೆಯುತ್ತಿರುವ ಮನೆ ಮನೆ ಗಂಗೆ ಕಾಮಗಾರಿಯನ್ನು ಆದಷ್ಟು ಶ್ರೀವಾಗಿ ಪೂರ್ಣಗೊಳಿಸಿ. ಗುತ್ತಿಗೆದಾರರು ಕಾಮಗಾರಿಗಾಗಿ ರಸ್ತೆಯನ್ನು ಅಗೆದು ತಕ್ಷಣ ಮುಚ್ಚುತ್ತಿಲ್ಲ. ಇದರಿಂದ ಓಡಾಡಲು ತೊಂದರೆಯಾಗುತ್ತಿದೆ ಹಾಗೂ ಕೆಲವು ಕಡೆ ಯಾವುದೇ ಪರೀೆ ಮಾಡದೆ ಗುಂಡಿಯನ್ನು ಕಾಂಕ್ರೇಟ್​ನಿಂದ ಮುಚ್ಚಲಾಗುತ್ತಿದ್ದು, ಮುಂದೆ ನೀರು ಸರಿಯಾಗಿ ಪೂರೈಕೆಯಾಗದಿದ್ದರೆ ಅದಕ್ಕೂ ಗುಂಡಿ ತೆಗೆಯುತ್ತಾರೆ. ಆದ್ದರಿಂದ ಮೊದಲು ಪರೀೆ ಮಾಡಿ ನಂತರ ಕಾಂಕ್ರೀಟ್​ ಹಾಕಿ ಮುಚ್ಚಿ ಎಂದು ಸದಸ್ಯೆ ಉಮಾ ವಿಜಯರಾಜ್​, ಶಿವಶಂಕರಪ್ಪ ಒತ್ತಾಯಿಸಿದರು.
ಶಿರಾದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತಿದೆ. ರಸ್ತೆಯಲ್ಲಿ ಸಂಚರಿಸುವವರನ್ನು ಕಚ್ಚಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಓಡಾಡುತ್ತ ವಾಹನ ಸವಾರರಿಗೆ ಅಡ್ಡ ಬಂದು ಅನೇಕ ಅನಾಹುತಗಳು ಆಗುತ್ತಿವೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ನಗರಸಭೆ ಸದಸ್ಯ ಉಮಾ ವಿಜಯರಾಜ್​ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ರುದ್ರೇಶ್​ ಅವರು ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗುತ್ತಿದೆ. ಆದರೂ ಹೊಸದಾಗಿ ಖರೀಸಿದಿ ಮತ್ತೆ ರಸ್ತೆಗೆ ಬಿಡುತ್ತಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್​ನ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಕೋತಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆಗೆ ತಿಳಿಸುವುದಾಗಿ ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ, ನಗರಸಭೆ ಅಧ್ಯಕ್ಷ ಜೀಷಾನ್​ ಮೊಹಮದ್​, ಉಪಾಧ್ಯಕ್ಷ ಲ್ಮಕಾಂತ್​, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್​ ಕುಮಾರ್​ ಸೇರಿದಂತೆ ನಗರಸಭೆ ಸದಸ್ಯರು ಭಾಗವಹಿಸಿದ್ದರು.