ಹಾರೋಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಗಳ ಸಹಾಯಧನವನ್ನು ಯೋಜನಾಧಿಕಾರಿ ಶುಭಾದೇವಿ ವಿತರಿಸಿದರು. ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ವೆಂಕಟೇಶ್, ಮುಖಂಡರಾದ ರಾಘವೇಂದ್ರ, ವೆಂಟಕೇಶಗೌಡ, ಯೋಗೇಶ್ ಇತರರಿದ್ದಾರೆ.
- ಹಾರೋಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ
- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಗಳ ಸಹಾಯಧನ
ತಾಲೂಕಿನ ಹಾರೋಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಗಳ ಸಹಾಯಧನವನ್ನು ವಿತರಿಸಲಾಯಿತು.
ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಯ ಚಿಕ್ಕಹುಣಸೂರು ಘಟಕದ ಯೋಜನಾಧಿಕಾರಿ ಶುಭಾದೇವಿ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ರೈತಾಪಿ ಕುಟುಂಬ ಹೈನುಗಾರಿಕೆ, ಕುಕ್ಕುಟ ಮತ್ತು ಕುರಿಸಾಕಣೆಯಂತಹ ಉದ್ಯೋಗಳನ್ನು ಮಾಡುವುದು ವಾಡಿಕೆ. ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ಅತ್ಯಂತ ಎತ್ತರಕ್ಕೆ ಬೆಳೆದಿದ್ದು, ಕುಟುಂಬದ ಯಜಮಾನಿ ಹೈನುಗಾರಿಕೆಯಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುದಾರಣೆಗೆ ಕಾರಣಳಾಗಿದ್ದಾಳೆ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಜನರ ಬದುಕು ಸುಧಾರಿಸಲು ಇಂತಹ ಕೃಷಿಉಪಕಸುಬುಗಳಿಗೆ ಬೆಂಬಲ ನೀಡುವ ಅಗತ್ಯವೆನ್ನುವುದು ಅವರ ಅಚಲವಾದ ನಂಬಿಕೆ. ಈ ದಿಸೆಯಲ್ಲಿ ಸಹಕಾರ ಸಂಘಕ್ಕೆ ಯೋಜನೆ ವತಿಯಿಂದ 2 ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹುಸೇನ್‌ಪುರ ಗ್ರಾ.ಪಂ.ಸದಸ್ಯ ರಾಘವೇಂದ್ರ, ಗ್ರಾಮದ ಮುಖಂಡರಾದ ವೆಂಕಟೇಶ್ ಗೌಡ, ಶಂಕರೇ ಗೌಡ, ಪರಶುರಾಮ, ವೆಂಕಟೇಶ್ ಗೌಡ, ದೇವರಾಜ್ ಎಚ್ ಕೆ, ಪರಮೇಶ, ಭಾಸ್ಕರ, ಮಂಜುನಾಥ್, ಯೋಗೇಶ್, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ರಘು, ನಿರ್ದೇಶಕರಾದ ಮಹದೇವ, ದೇವರಾಜೇಗೌಡ, ಕರಿಗೌಡ, ಅಣಿ ಆಚಾರ್, ಸುರೇಶ್, ಗಣೇಶ್, ರಾಜಮ್ಮ, ಗೌರಮ್ಮ, ಅನುಷಾ, ಶ್ಯಾಮಲಾ, ಗಾಯತ್ರಿ, ಪ್ರೀತಿ, ಭಾರತಿ, ಸವಿತಾ, ಉಷಾ, ಪವಿತ್ರಾ ಇತರರಿದ್ದರು.