ಹರಿಹರನ್ ತಂಡದವರಿಂದ ಮನಸೂರೆಗೊಳ್ಳುವ ಸಂಗೀತ ಕಾರ್ಯಕ್ರಮ. 
ರಾಜ್ಯ

ಹಂಪಿ ಉತ್ಸವ: ಸಂಗೀತ ರಸದೌತಣ ನೀಡಿದ ಕಲಾವಿದರು

ಪ್ರಮುಖ ಮುಖ್ಯಾಂಶಗಳು

  • ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆ
  • ಸ್ಥಳೀಯ ಹಾಗೂ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಹಂಪಿ: ಹಂಪಿ ಉತ್ಸವದ ಅಂಗವಾಗಿ ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆಗಳಲ್ಲಿ ಮೊದಲ ಎರಡು ದಿನ ಸ್ಥಳೀಯ ಹಾಗೂ ಪ್ರಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಉಣಬಡಿಸಿದರು. 
ಮೊದಲ ದಿನ ನಟ ಶಿವರಾಜ್ ಕುಮಾರ್ ಉಪಸ್ಥಿತಿಯೊಂದಿಗೆ ವಿಜಯ ಪ್ರಕಾಶ್, ಹರಿಹರನ್, ಶಮಿತಾ ಮಲ್ನಾಡ್ ಹಾಗೂ ಕಲಾವತಿ ದಯಾನಂದ ತಂಡದವರಿಂದ ಮನಸೂರೆಗೊಳ್ಳುವ ಸಂಗೀತ ಕಾರ್ಯಕ್ರಮ ನಡೆಯಿತು. 
ಎರಡನೇ ದಿನ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ರಾಜ್ ಬಿ. ಶೆಟ್ಟಿ, ಝೈದ್ ಖಾನ್, ನಟಿ ಸಪ್ತಮಿ ಗೌಡ, ಬಿಗ್‌ಬಾಸ್ ವಿನ್ನರ್ ಗಿಲ್ಲಿ ಹಾಗೂ ಕಿರುತೆರೆ ನಟಿ ಕಾವ್ಯ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇದೇ ವೇಳೆ ಗಾಯಕರಾದ ನವೀನ್ ಸಜ್ಜು, ಅರ್ಜುನ ಜನ್ಯ, ಎಂ.ಡಿ. ಪಲ್ಲವಿ ಹಾಗೂ ಸ್ವರಾರ್ಥ ಬಾಂಡ್ ತಂಡದ ಹಾಡುಗಳಿಗೆ ಪ್ರವಾಸಿಗರು ಕುಣಿದು ಕುಪ್ಪಳಿಸಿದರು.
ಮೂರನೇ ದಿನವಾದ ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ನಟರಾದ ಡಾಲಿ ಧನುಂಜಯ್, ಧ್ರುವ ಸರ್ಜಾ ಮತ್ತು ನಟಿ ರಚಿತಾ ರಾಮ್ ಆಗಮಿಸಿ ಮೆರುಗು ನೀಡಲಿದ್ದಾರೆ. ಅಂದು ಸಂಜೆ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಗಾಯಕರಾದ ಮಂಗಲಿ, ಮಣಿಕಾಂತ್, ವಾಸುಕಿ ವೈಭವ್, ಹನುಮಂತು ಹಾಗೂ ಖಾಸಿಂ ತಂಡದಿಂದ ಅದ್ದೂರಿ ಸಂಗೀತ ಕಾರ್ಯಕ್ರಮ ಜರುಗಲಿದೆ.