ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಆಯೋಜನೆ 
ರಾಜ್ಯ

ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ಸಹಕಾರಿ:ಡಾ.ಬಿಳ್ಳೂರ ಅಭಿಪ್ರಾಯ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಹ್ಯಾಕಥಾನ್
  • ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ಸಹಕಾರಿ: ಡಾ.ಬಿಳ್ಳೂರ ಅಭಿಪ್ರಾಯ
  • ಹ್ಯಾಕಥಾನ್ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ಸಹಕಾರಿ
| ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಅಭಿಪ್ರಾಯ| ಹ್ಯಾಕಥಾನ್ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಹ್ಯಾಕಥಾನ್ ಕೇವಲ ಸ್ಪರ್ಧೆಯಲ್ಲಿ ನೈಜ ಜೀವನದ ಸಮಸ್ಯೆಗಳಿಗೆ ನವೀನ ಹಾಗೂ ಪ್ರಾಯೋಗಿಕ ಪರಿಹಾರಗಳು ನಿರ್ವಹಿಸುವ ಉತ್ತಮ ವೇದಿಕೆಯಾಗಿದೆ ಎಂದು ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಮತ್ತು ಐಸಿಟಿಐಐ ಆಶ್ರಯದಲ್ಲಿ ಈಚೆಗೆ ಹೊಂದಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆಂತರಿಕ ಹ್ಯಾಕಥಾನ್ ಕಾರ್ಯಕ್ರಮವನ್ನು ಅವರು ಪ್ರಕಟಿಸಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಹಂತಕ್ಕೆ ಆಯ್ಕೆ ತಂಡಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಬೆಂಬಲ ನೀಡಲಾಯಿತು.
ಸಹಾಯಕ ಪ್ರಾಧ್ಯಾಪಕ ಸಂಜು ಕಪಾಲಿ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮಕ್ಕೆ ಮುನ್ನ ಆಯ್ಕೆಯಾದ ತಂಡಗಳ ಪ್ರೋಟೋಟೈಪ್‌ಗಳನ್ನು ಮತ್ತಷ್ಟು ಹೆಚ್ಚಿಸಲಾಯಿತು ಸುಧಾರಿಸಲು ಅಗತ್ಯ ಮಾರ್ಗದರ್ಶನ ಹೆಚ್ಚಿಸಲಾಗಿದೆ.
ಹ್ಯಾಕಥಾನ್‌ನಲ್ಲಿ 78 ವಿದ್ಯಾರ್ಥಿಗಳು 13 ತಂಡಗಳಾಗಿ ಭಾಗವಹಿಸಿ, 15 ಸಮಸ್ಯೆ ಹೇಳಿಕೆಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ, ವಿಪತ್ತು ನಿರ್ವಹಣೆ, ವಂಚನೆ ಪತ್ತೆ, ಸ್ಮಾರ್ಟ್ ಕ್ಯಾಟಲಿಂಗ್ ಹಾಗೂ ಪರಿಸರ ಮೇಲ್ವಿಚಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳ ತಾಂತ್ರಿಕ ಪರಿಹಾರಗಳು ಮಂಡಿಸಿದರು.ಇದರಲ್ಲಿ 13 ತಂಡಗಳಲ್ಲಿ 9 ತಂಡಗಳು ಮುಂದಿನ ಹಂತಕ್ಕೆ ಆಯ್ಕೆಯಾದವು.

ರಾಷ್ಟ್ರಿಯ ಸ್ಪರ್ಧೆಗೆ ಆಯ್ಕೆಯಾದ ಎಲ್ಲ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಮಹಾಂತೇಶ ಕವಟಗಿಮಠ,ಮತ್ತು ಕೆ. ಎಲ್.ಈ ಸಂಸ್ಥೆಯ ಕಾರ್ಯಾಧ್ಯಕ್ಷ ಅಮೀತ ಕೋರೆ ಅವರು ಶುಭ ಹಾರೈಸಿದರು.

ಅಕ್ಷಯ ಹಿರೇಮಠ, ಡಾ.ಚಂದ್ರಕಾಂತ ಉಮರಾಣಿ, ಡಾ.ವಿನೋದ ಬಿರಾದಾರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.