ಯಾದಗಿರಿಯಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಡಾ.ಗುರುಪ್ರಸಾದ ವೈದ್ಯ, ಉತ್ತರಾದೇವಿ ಮಠಪತಿ ಸೇರಿದಂತೆಯೇ ಇತರರಿದ್ದರು. 
ರಾಜ್ಯ

ಕಾಯಕ ಜೀವಿಯಾದ ಹಡಪದ ಅಪ್ಪಣ್ಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಬಣ್ಣನೆ
  • ಯಾದಗಿರಿ ಜಿಲ್ಲಾದ್ಯಂತ ಜಯಂತಿ ಆಚರಣೆ
ಯಾದಗಿರಿ : ಹಡಪದ ಅಪ್ಪಣ್ಣ ಅವರು ಸಮಾನತೆ, ದಾಸೋಹ, ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಮೂಲಕ ಜÁತಿ, ಮತ ಮತ್ತು ವರ್ಣಭೇದಗಳನ್ನು ತಿರಸ್ಕರಿಸಿ, ಪ್ರತಿಯೊಬ್ಬ ಮಾನವನಲ್ಲಿಯೂ ಶಿವನನ್ನು ಕಾಣುವ ಬಸವ ತತ್ವವನ್ನು ತಮ್ಮ ಜೀವನದಲ್ಲಿ ಆಚರಿಸಿಕೊಂಡಿದ್ದರು ಎಂದು ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಹೇಳಿದರು.
ಇಲ್ಲಿನ ಜಿ¯್ಲÁ ಕಸಾಪ ಸಭಾಂಗಣದಲ್ಲಿ ಬುಧವಾರ ಜಿ¯್ಲÁಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಿತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣದ ಶರಣ ಚಳವಳಿಯಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಅವರು ತೋರಿದ ನಿಷ್ಠೆ, ಧೈರ್ಯ ಮತ್ತು ಸೇವಾಭಾವ ಇಂದಿಗೂ ಮಾದರಿಯಾಗಿದೆ. ಅವರ ಜೀವನವು ಕೇವಲ ಒಬ್ಬ ಶರಣನ ಜೀವನವಲ್ಲ, ಸಮಾಜಕ್ಕೆ ದಾರಿದೀಪವಾದ ಆದರ್ಶ ಜೀವನವಾಗಿದೆ ಎಂದು ಬಣ್ಣಿಸಿದರು.
ಇವರು ಸುಮಾರು ೨೪೨ ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಿದ್ದಾರೆ. ಅವರ ವಚನಗಳಲ್ಲಿ ಆತ್ಮಸಾಕ್ಷಾತ್ಕಾರ ಮತ್ತು ಲಿಂಗೈಕ್ಯದ ಅನುಭವ ಅತ್ಯುನ್ನತ ಸ್ಥಾನ ಪಡೆದಿದೆ ಎಂದು ಮಾರ್ಮಿಕವಾಗಿ ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಗುರುಪ್ರಸಾದ ವೈದ್ಯ, ಕ್ರಿಶ ೧೧೩೪ರಲ್ಲಿ ಇಂದಿನ ವಿಜಯಪುರ ಜಿ¯್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಾಬೀನಾಳ ಗ್ರಾಮದಲ್ಲಿ ಚನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗೆ ಜನಿಸಿದ ಅಪ್ಪಣ್ಣರು ಕ್ಷೌರಿಕ(ಹಡಪದ/ನಾಯಿಂದ) ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರು ತಮ್ಮ ವೃತ್ತಿಯನ್ನು ಕೇವಲ ಜೀವನೋಪಾಯವೆಂದು ಪರಿಗಣಿಸಲಿಲ್ಲ. ತಮ್ಮ ಕಾಯಕವನ್ನೇ ಶಿವಸೇವೆಯಾಗಿ ಸ್ವೀಕರಿಸಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ, ಸಮಾಜದ ಮುಖಂಡರು ಇತರರಿದ್ದರು.