ಹೊಸಕೋಟೆ ತಾಲೂಕಿನ ನಂದಗುಡಿಯ ಶ್ರೀಮದ್ ವಿರಾಟ್ ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ವೀರಬ್ರಹ್ಮೇಂದ್ರಸ್ವಾಮಿಯ 8ನೇ ಆರಾಧನೆ ಕಾರ್ಯಕ್ರಮದಲ್ಲಿ ಶ್ರೀವಿರಬ್ರಹ್ಮೇಂದ್ರ ಮಠ ಟ್ರಸ್ಟ್ನ ಗೌರವಾಧ್ಯಕ್ಷ ತ್ಯಾಗರಾಜ ಆಚಾರಿ, ಅಧ್ಯಕ್ಷ ಬಾಲಸುಬ್ರಮಣ್ಯ ಆಚಾರಿ, ಕಾರ್ಯದರ್ಶಿ ಚಂದ್ರಚಾರಿ, ಖಜಾಂಚಿ ಮುನಿಶಾಮ ಆಚಾರಿ ಇತರರು ಇದ್ದರು.
ನಂದಗುಡಿ : ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನದ ಅಗತ್ಯವಿದೆ ಎಂದು ಶ್ರೀವಿರಬ್ರಹ್ಮೇಂದ್ರ ಮಠ ಟ್ರಸ್ಟ್ ಅಧ್ಯಕ್ಷ ಬಾಲಸುಬ್ರಮಣ್ಯ ಆಚಾರಿ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿಯ ಶ್ರೀಮದ್ ವಿರಾಟ್ ಶ್ರೀಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಶ್ರೀ ವೀರಬ್ರಹ್ಮೇಂದ್ರಸ್ವಾಮಿ 8ನೇ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದ ಸಾರ್ಥಕತೆಗಾಗಿ ತುಡಿಯುತ್ತಿರುವಾಗ ಸಾರ್ಥಕತೆಯ ಮಾರ್ಗ ಯಾವುದು ಎಂಬ ಅರಿವು ನೀಡುವವನೇ ಗುರು. ಜಗತ್ತಿನಲ್ಲಿ ಸುಖ, ಶಾಂತಿ, ನೆಮ್ಮದಿ, ಪರಸ್ಪರರಲ್ಲಿ ಸೌಹಾರ್ದ, ಸಾಮರಸ್ಯ ಬೆಳೆದರೆ ಸಂಬಂಧ ಗಟ್ಟಿಯಾಗುತ್ತದೆ. ಮನುಷ್ಯ ಉತ್ತಮ ಜೀವನ ನಡೆಸಿ ಸನ್ಮಾರ್ಗದಲ್ಲಿ ನಡೆಯಲು ದೇವರಲ್ಲಿ ಶ್ರದ್ಧಾ-ಭಕ್ತಿ, ಧಾರ್ಮಿಕ ಚಿಂತನೆ ಅತ್ಯಗತ್ಯ. ಪ್ರಸ್ತುತ ಸತ್ಯ, ಧರ್ಮ, ಸಂಸತಿ ಬೆಳೆಸುವುದು ಕಠಿಣವಾಗಿದೆ. ಮನುಷ್ಯ ಜನಮಾನಸದಲ್ಲಿ ಎತ್ತರಕ್ಕೆ ಬೆಳೆಯಲು ಧರ್ಮ, ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೋಮ, ಹವನ, ವಿವಿಧ ಅಭಿಷೇಕಗಳೊಂದಿಗೆ ಅಲಂಕಾರ, ಮಹಾ ಮಂಗಳಾರತಿ ಅನ್ನಸಂತರ್ಪಣೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ವಿಶ್ವಕರ್ಮ ತಾಲೂಕು ಅಧ್ಯಕ್ಷ ಸುರೇಶ್, ಟ್ರಸ್ಟ್ನ ನಿರ್ದೇಶಕರಾದ ಗೋವಿಂದಮ್ಮ, ರಾಘವಾಚಾರಿ, ಬಿ.ಕೃಷ್ಣ ಆಚಾರಿ, ರಾಜೇಶ್, ಶಂಕರಚಾರಿ, ರಾಮಚಂದ್ರ ಆಚಾರಿ, ಈಶ್ವರ ಆಚಾರಿ, ಸುಬ್ರರಾಯಚಾರಿ, ಸುಬ್ರಮಣಿ ಆಚಾರಿ, ಪೋಸ್ಟ್ ಚಂದ್ರಾಚಾರಿ, ಅರ್ಚಕ ಗಣೇಶ ಆಚಾರಿ, ಗ್ರಾಮಸ್ಥರು ಇದ್ದರು.