ಪಾರಿಶ್ವಾಡದ ಹನಿವೆಲ್ ಇಂಟರನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶ್ರೀಕಾಂತ ಶಾನವಾಡ, ಸುಭಾಷ ಗುಳಶೆಟ್ಟಿ ಇತರರಿದ್ದರು.
ಇಟಗಿ: ಜೀವನದಲ್ಲಿ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಹಾಗೂ ಸತತ ಪ್ರಯತ್ನ ಬಹುಮುಖ್ಯವಾಗಿವೆ ಎಂದು ಪ್ರೊ.ಶ್ರೀಕಾಂತ ಶಾನವಾಡ ಹೇಳಿದರು. ಸಮೀಪದ ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರನ್ಯಾಷನಲ್ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಣ ನೀಡುವ ಜತೆಗೆ ಸಂಸ್ಕಾರ ಹಾಗೂ ಮೌಲ್ಯ ರೂಢಿಸಲು ವಿನೂತನ ಕಾರ್ಯಚಟುವಟಿಕೆ ಹಾಕಿಕೊಂಡಿರುವ ಹನಿವೆಲ್ ಇಂಟರನ್ಯಾಷನಲ್ ಶಾಲೆ ಆಡಳಿತ ಮಂಡಳಿ ಕಾರ್ಯ ಶ್ಲಾನೀಯವಾಗಿದೆ ಎಂದರು. ಸಂಸ್ಥೆ ಅಧ್ಯ ಸುಭಾಷ ಗುಳಶೆಟ್ಟಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮೂಲಕ ಆಧುನಿಕತೆಯಲ್ಲಿ ಮುಂದುವರಿದ ಜಗತ್ತು ಮಾನವೀಯ ಮೌಲ್ಯ ಮರೆಯುತ್ತಿರುವುದು ವಿಷಾದದ ಸಂಗತಿ ಎಂದರು. ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ನಿರ್ದೇಶಕರಾದ ಶಿವಾನಂದ ಪಾಟೀಲ, ಸುನೀತಾ ಗುಳಶೆಟ್ಟಿ, ಬಸನಗೌಡ ನಾಡಗೌಡರ, ಶಂಕರಗೌಡ ಪಾಟೀಲ, ಶಿವಾನಂದ ಗುದ್ಲಿ, ಡಾ.ಅನಿಲಕುಮಾರ ಬೆಣಗಿ ಇತರರಿದ್ದರು.