ಶಹಾಪುರ ತಾಲೂಕಿನ ಕನ್ನೆಕೊಳ್ಳೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಶ್ರೀಗುರು ಸಿದ್ಧಲಿಂಗೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀಮಠದ ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯ, ಸಿದ್ದಲಿಂಗ ಸ್ವಾಮೀಜಿ, ಕೌಳೂರಿನ ಸಿದ್ಧರಾಮ ದೇವರು, ಚನ್ನವೀರಯ್ಯಸ್ವಾಮಿ ಕೌಳೂರು, ರುದ್ರಮುನಿ ಹಿರೇಮಠ ಇತರರಿದ್ದರು.
- ಕನ್ನೆಕೊಳೂರನ ಚನ್ನವೀರ ಶ್ರೀ ಹೇಳಿಕೆ
- ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ
ಯಾದಗಿರಿ: ಧರ್ಮ ನಮ್ಮ ಬಾಳಿಗೆ ಬೆಳಕಾಗಿದೆ. ಪೂಜೆ, ಪ್ರವಚನ, ಆಚಾರ-ವಿಚಾರಗಳಿಂದ ಮನುಷ್ಯನ ಅಂತರAಗ-ಬಹಿರAಗ ಶುದ್ಧಿಯಾಗುವುದರ ಜತೆ ಆತ್ಮೋದ್ಧಾರದ ಮಹತ್ವ ಅಡಗೊಇದೆ ಎಂದು ಕನ್ನೆಕೊಳೂರಿನ ಶ್ರೀ ಗುರು ಸಿದ್ಧಲಿಂಗೇಶ್ವರ ಹಿರೇಮಠದ ಪೀಠಾಽಪತಿ ಚನ್ನವೀರ ಶಿವಾಚಾರ್ಯರು ನುಡಿದರು.
ಶಹಾಪುರ ತಾಲೂಕಿನ ಕನ್ನೆಕೊಳ್ಳೂರು ಗ್ರಾಮದ ಶ್ರೀ ಗುರು ಸಿದ್ಧಲಿಂಗೇಶ್ವರ ಹಿರೇಮಠದಲ್ಲಿ ಶುಕ್ರವಾರ ನೂತನ ಶ್ರೀಗುರು ಸಿದ್ಧಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀಮಠದ ನೂತನ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕತೆಯಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಮನುಷ್ಯ ಸನ್ಮಾರ್ಗ ಪಥದಲ್ಲಿ ನಡೆದು ಯಶಸ್ಸು ಜೀವನ ನಡೆಸಲು ಸಮರ್ಥ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ಹರ ಮುನಿದರೆ ಗುರು ಕಾಯುವನು ಎನ್ನುವಂತೆ ಈಗ ಮಠದಲ್ಲಿ ನಾವು ಪೀಠವನ್ನು ಅಲಂಕರಿಸಿ ೨೫ ವರ್ಷಗಳು ಸಂದಿವೆ, ಈ ನಿಮಿತ್ತ ಎಲ್ಲ ಕಾರ್ಯಕ್ರಮಗಳು ನಡೆದಿವೆ ಎಂದರು. ಯಾವತ್ತೂ ಗುರು ಪರಂಪರೆಯನ್ನು, ಆಚಾರ್ಯ ಪರಂಪರೆಯನ್ನು ಭಕ್ತಿ ಶ್ರದ್ಧೆಯಿಂದ ಗೌರವಿಸಸುತ್ತಾ ಬಂದಿರುವ ಭಕ್ತ ಕುಲಕೋಟಿಗೆ ಸನ್ಮಂಗಳವಾಗಲಿ, ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧಿಯಾಗಲೆಂದು ಆಶೀರ್ವಚನ ನೀಡಿದರು.
ಬೆಳಗ್ಗೆ ನೂತನ ಮಠದಲ್ಲಿ ಶ್ರೀಗುರು ಸಿದ್ಧಲಿಗೇಶ್ವರ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಪನೆಯನ್ನು ಪೀಠಾಽಪತಿಗಳ ಸಾನ್ನಿಧ್ಯದಲ್ಲಿ ಶಾಸೊöÃಕ್ತವಾಗಿ ನಡೆಯಿತು. ನೂತನ ಮೂರ್ತಿಗೆ ಮಹಾರುದ್ರಾಬಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರುತಿ ಇತರೆ ಪೂಜಾ ಕೈಂಯರ್ಕಗಳು ನಡೆದವು. ಈ ವೇಳೆ ಆಂದೋಲದ ಸಿದ್ಧಲಿಂಗ ಸ್ವಾಮೀಜಿ, ಕೌಳೂರಿನ ಸಿದ್ಧರಾಮ ದೇವರು, ಚನ್ನವೀರಯ್ಯಸ್ವಾಮಿ ಕೌಳೂರು ಮತ್ತು ರುದ್ರಮುನಿ ಹಿರೇಮಠ ಇತರರಿದ್ದರು.