ಗಂದಿಗವಾಡ ಗ್ರಾಮದ ಪರಂಜ್ಯೋತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಉಮೇಶ ಮೂಲಿಮನಿ, ಎಸ್​.ಎಂ.ನಾಯ್ಕ ಇತರರಿದ್ದರು. 
ರಾಜ್ಯ

ಗುರುವಂದನೆ ಮಾದರಿ ಕಾರ್ಯಕ್ರಮ

ಎಂ.ಎಸ್​.ಹಿರೇಮಠ ಬೆಳಗಾವಿ
ಇಟಗಿ: ಭಾರತೀಯ ಸಂಸತಿ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಗುರುವಿಗೆ ಉನ್ನತ ಸ್ಥಾನ ನೀಡುವ ಮೂಲಕ ಗೌರವಿಸಿದೆ ಎಂದು ಗಂದಿಗವಾಡ ರಾಜಗುರು ಹಿರೇಮಠ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗಂದಿಗವಾಡ ಗ್ರಾಮದ ಪರಂಜ್ಯೋತಿ ಪ್ರೌಢಶಾಲೆಯಲ್ಲಿ 2002&2003ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಕೀಲ ಉಮೇಶ ಮೂಲಿಮನಿ ಮಾತನಾಡಿದರು. ಮುಖ್ಯಶಿಕ್ಷಕ
ಎಸ್​.ಎಂ.ನಾಯ್ಕ, ನಿವೃತ್ತ ಮುಖ್ಯಶಿಕ್ಷಕ ಪಿ.ವೈ.ಪಾಟೀಲ, ನಿವೃತ್ತಶಿಕ
ಎಸ್​.ಜಿ.ಕುಲಕರ್ಣಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಮಹೇಶ ಕಂಬಳಿ, ವಿಜಯ ಯಮಕನಮರಡಿ, ತೌಸ್​ಿ ಭಾಗವಾನ, ಶೈಲಾ ಕಂಬಳಿ, ಅಂಜನಾ ಲಕ್ಕನಗೌಡರ, ರವಿ ಹುಲಿಕವಿ, ನಾಗಮ್ಮ ಕಾಗೆಹಳ್ಳಿ, ವಿಜಯ ಇಟಗಿ, ಸವಿತಾ ಠಕಾಯಿ, ಪಿ.ಎಸ್​.ಜಯಗೌಡರ, ಮಹಾವೀರ ಮಂಡೆದ ಇತರರಿದ್ದರು.