ಗುಲ್ಬರ್ಗ ವಿವಿ ಅತಿಥಿಗೃಹದಲ್ಲಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​, ಜಯಾಂಬಿಕಾ ಇದ್ದರು. 
ರಾಜ್ಯ

ಗುಲ್ಬರ್ಗ ವಿವಿ 43ನೇ ಘಟಿಕೋತ್ಸವ 24ರಂದು

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿಕೆ
  • ಸಿಂಧ್ಯಾ, ನಿರಾಣಿ, ಹಿರೇಮಠ್​ಗೆ ಗುಲ್ಬರ್ಗ ವಿವಿ ಗೌಡಾ
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಟಿಕೋತ್ಸವು ಾನಗಂಗಾ ಆವರಣದಲ್ಲಿನ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ಫೆಬ್ರವರಿ 24ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ. ಮೂವರು ಸಾಧಕರಿಗೆ ಈ ಬಾರಿ ಗೌರವ ಡಾಕ್ಟರೇಟ್​ ನೀಡಿ ಗೌರವಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್​ ಉಡಿಕೇರಿ ಹೇಳಿದರು.
ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ರಾಜಕೀಯ ೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್​.ಸಿಂಧ್ಯಾ, ಸಾಮಾಜಿಕ ಸೇವೆ ಪರಿಗಣಿಸಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ್​ ಅವರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯಪಾಲರೂ ಆದ ವಿಶ್ವವಿದ್ಯಾಲಯ ಕುಲಾಧಿಪತಿ ಥಾವರ್​ಚಂದ್​ ಗೆಹಲೋತ್​ ಟಿಕೋತ್ಸವದ ಅಧ್ಯತೆ ವಹಿಸಿ ಗಣ್ಯರಿಗೆ ಗೌರವ ಡಾಕ್ಟರೇಟ್​, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಣ ಸಚಿವರೂ ಆದ ವಿವಿ ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ ಮುಖ್ಯ ಅತಿಥಿಯಾಗಿದ್ದು, ಪುಣೆಯ ಉನ್ನತ ರಣಾ ತಂತ್ರಾನ ಸಂಸ್ಥೆ (ಡೀಮ್ಡ್​ ವಿಶ್ವವಿದ್ಯಾಲಯ)ಯ ವಿಶ್ರಾಂತ ಕುಲಪತಿ ಪ್ರೊ.ಎಲ್​.ಎಂ.ಪಟ್ನಾಯಕ್​ ಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
2023&24ನೇ ಸಾಲಿಗೆ ಸಂಬಂಧಿಸಿದ 43ನೇ ಟಿಕೋತ್ಸವ ಯಶಸ್ವಿಗೆ ಈಗಾಗಲೆ 16 ಉಪ ಸಮಿತಿ ರಚಿಸಿದ್ದು, ಸಕಲ ಸಿದ್ಧತೆ ಪ್ರಕ್ರಿಯೆ ನಡೆದಿವೆ. ಟಿಕೋತ್ಸವ ಈ ಹಿಂದೆಯೆ ಆಗಬೇಕಿತ್ತು. ಕಾರಣಾಂತರದಿಂದ ವಿಳಂಬವಾಗಿದ್ದು, ಇದು ಪೂರ್ಣಗೊಂಡ ನಂತರ ಶ್ರೀವೇ 2024&25ನೇ ಸಾಲಿಗೆ ಸಂಬಂಧಿಸಿದ 44ನೇ ಟಿಕೋತ್ಸವವನ್ನೂ ನಡೆಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಚಿನ್ನದ ಪದಕ

43ನೇ ವಾರ್ಷಿಕ ಟಿಕೋತ್ಸವದಲ್ಲಿ ವಿವಿಧ ಸ್ನಾತಕ ಪದವಿ ಕೋರ್ಸ್​ಗಳಿಗೆ 24 ಹಾಗೂ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ 148 ಸೇರಿ ಒಟ್ಟಾರೆ 172 ಚಿನ್ನದ ಪದಕಗಳನ್ನು 58 ಜನ ವಿದ್ಯಾರ್ಥಿನಿಯರು, 19 ಜನ ವಿದ್ಯಾರ್ಥಿಗಳು ಸೇರಿ 77 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ಜನ ವಿದ್ಯಾರ್ಥಿನಿಯರು, 5 ಜನ ವಿದ್ಯಾರ್ಥಿಗಳು ಸೇರಿ 19 ಜನರಿಗೆ ನೀಡಲಾಗುವುದು.
ಚಿನ್ನದ ಪದಕ ವಿಜೇತರಲ್ಲಿ ವಿವಿ ಮುಖ್ಯ ಆವರಣದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಚನ್ನಮ್ಮ ಇವರು ಅತಿ ಹೆಚ್ಚು 11 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಪ್ರಾಣಿಶಾಸ ವಿಭಾಗದ ರಾಹುಲ್​ 9, ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ  ಸುರೇಖಾ 8, ರಾಜ್ಯಶಾಸ ವಿಷಯದಲ್ಲಿ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶಮೀಮ್​ ರಫತ್​ 6, ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ದೀಪಾ 6, ಗಣಕ ವಿಾನ ವಿಭಾಗದ ವಿದ್ಯಾರ್ಥಿನಿ ಸುಬೀಯಾ ನೂರೈನ್​ 5, ರಸಾಯನಶಾಸ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ರಾಠೋಡ್​ 5, ಜೀವ ರಸಾಯನಶಾಸ ವಿಭಾಗದ ವಿದ್ಯಾರ್ಥಿ ಶಶಿಕುಮಾರ್​ 5 ಹಾಗೂ ಕಲಬುರಗಿ ನಗರದ ಗುರುಕುಲ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರೀತಿ ಜಿ. ಖೇಮ್ಕರ್​ ಅವರು ಬಿಕಾಂ ಕೋರ್ಸಿನಲ್ಲಿ 5 ಚಿನ್ನದ ಪದಕ ಪಡೆಯಲಿದ್ದಾರೆ ಎಂದು ವಿವಿರ ನೀಡಿದರು.

123 ಅಭ್ಯರ್ಥಿಗಳಿಗೆ ಪಿಎಚ್​ಡಿ

43ನೇ ಟಿಕೋತ್ಸವದಲ್ಲಿ ವಿವಿಧ ನಿಕಾಯಗಳಲ್ಲಿ ಒಟ್ಟು 123 ವಿದ್ಯಾರ್ಥಿಗಳಿಗೆ ಪಿಎಚ್​ಡಿ ಪದವಿ ಪ್ರದಾನ ಮಾಡಲಾಗುತ್ತಿದೆ. ಕಲಾ ನಿಕಾಯದಲ್ಲಿ 30, ಸಮಾಜ ವಿಾನ ನಿಕಾಯದಲ್ಲಿ 26, ವಿಾನ ಮತ್ತು ತಂತ್ರಾನ ನಿಕಾಯದಲ್ಲಿ 47, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಲ್ಲಿ 9, ಶಿಣ ನಿಕಾಯದಲ್ಲಿ 7 ಹಾಗೂ ಕಾನೂನು ನಿಕಾಯದಲ್ಲಿ 4 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆಯಾಗಿ 62 ಜನ ವಿದ್ಯಾರ್ಥಿಗಳು, 61 ಜನ ವಿದ್ಯಾರ್ಥಿನಿಯರು ಪಿಎಚ್​ಡಿ ಪಡೆಯಲಿದ್ದಾರೆ.
ಕುಲಸಚಿವ ಪ್ರೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ ಇತರರಿದ್ದರು.
"

ಪದವಿ ಕೋರ್ಸ್​ನಲ್ಲಿ 15,504, ಸ್ನಾತಕೋತ್ತರ ಕೋರ್ಸ್​ನಲ್ಲಿ 3,462, ಪಿ.ಜಿ.ಡಿಪ್ಲೊಮಾ ಕೋರ್ಸಿನಲ್ಲಿ 44 ಹಾಗೂ ಪಿಎಚ್​ಡಿ ಪದವಿ 123 ಸೇರಿ ಒಟ್ಟಾರೆ 19,133 ವಿದ್ಯಾರ್ಥಿಗಳು ವಿವಿಧ ಪದವಿ ಪಡೆಯಲಿದ್ದಾರೆ. ಇದರಲ್ಲಿ 10,463 ವಿದ್ಯಾರ್ಥಿಗಳು ಹಾಗೂ 8,670 ಜನ ವಿದ್ಯಾರ್ಥಿನಿಯರು ಸೇರಿದ್ದಾರೆ. 

ಪ್ರೊ.ಶಶಿಕಾಂತ ಉಡಿಕೇರಿ, 

ಕುಲಪತಿ, ಗುಲ್ಬರ್ಗ ವಿವಿ.