ಕಲಬುರಗಿಯ ಗುರುಕುಲ ಪಿಯು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿಲಾಸ ಬಗಾಡೆ, ಸಂತೋಷ ಕುಲಕರ್ಣಿ, ಮಂಗೇಶಕುಮಾರ ಖಡಕೆ, ರವಿಕುಮಾರ ವಲ್ಲಮಸೆಟ್ಟಿ, ರಮೇಶ ಕುಲಕರ್ಣಿ ಇದ್ದರು. 
ರಾಜ್ಯ

ಯಶಸ್ಸು ಗಳಿಸಲು ಮಾರ್ಗದರ್ಶನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ವಿಲಾಸ ಬಗಾಡೆ ಹೇಳಿಕೆ
  • ಗುರುಕುಲ ಪಿಯು ವಾಣಿಜ್ಯ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ಕಲಬುರಗಿ: ಒಳ್ಳೆಯ ಗುರಿ, ಸೂಕ್ತ ಮಾರ್ಗದರ್ಶನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಗುರುಕುಲ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ವಿಲಾಸ ಬಗಾಡೆ ಹೇಳಿದರು.
ಜಾಜಿ ಫೌಂಡೇಷನ್​ನ ಗುರುಕುಲ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ವಾಣಿಜ್ಯಶಾಸ ಕೋರ್ಸ್​ ಆಯ್ಕೆ ಮಾಡಿಕೊಂಡಿದ್ದೀರಿ. ಇದರಲ್ಲಿ ಅಕೌಂಟ್ಸ್​ ವಿಷಯ ಪ್ರಾಧಾನ್ಯತೆ ಪಡೆದಿದೆ. ಭವಿಷ್ಯದಲ್ಲಿ ವ್ಯಾಪಾರ, ವ್ಯವಹಾರ ಮಾಡುವವರು ಶಿಸ್ತು, ಕ್ರಮಬದ್ಧ ಜೀವನದಿಂದ ಒಳ್ಳೆಯ ವ್ಯಾಪಾರಿಗಳಾಗಲು ಈ ಮೂಲಕ ಸಾಧ್ಯವಾಗಲಿದೆ ಎಂದರು.
ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಮಂಗೇಶಕುಮಾರ ಖಡಕೆ ಮಾತನಾಡಿ, ಗುರು&ಶಿಷ್ಯರ ಸಂಬಂಧ ಪವಿತ್ರವಾದದ್ದು. ಶಿಷ್ಯರು ಗುರಿ ಮುಟ್ಟುವವರೆಗೂ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಯ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಗುರುಕುಲ ಪಬ್ಲಿಕ್​ ಶಾಲೆ ಪಾಚಾರ್ಯ ಸಂತೋಷ ಕುಲಕರ್ಣಿ, ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ ವಲ್ಲಮಶೆಟ್ಟಿ ಮಾತನಾಡಿದರು.
ಮಾನವ ಸಂಪನ್ಮೂಲ ಅಧಿಕಾರಿ ರಮೇಶ ಕುಲಕರ್ಣಿ ಇತರರಿದ್ದರು. ವಿದ್ಯಾರ್ಥಿ ಸಂಕರ್ಷಣ ಲಾತುರಕರ್​ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿ ಅಕ್ಷರಾ ಕಳಸ್ಕರ್​ ಸ್ವಾಗತಿಸಿದರು. ವಿದ್ಯಾರ್ಥಿ ಮುಸ್ಕಾನ್​ ವಂದಿಸಿದರು. ಪಲಕ್​ ಮತ್ತು ರೋಹನ್​ ನಿರೂಪಣೆ ಮಾಡಿದರು.
"

ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಶಿಸ್ತು ಮತ್ತು ಪ್ರಾಮಾಣಿಕತೆಯಿದ್ದರೆ ಸಮಾಜದಲ್ಲಿ ಮಾನ, ಸನ್ಮಾನ ದೊರೆಯಲಿದೆ. ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನವಿದ್ದರೆ ಗುರಿ ತಲುಪಲು ಸಾಧ್ಯ.

— > ರವಿಕುಮಾರ ವಲ್ಲಮಶೆಟ್ಟಿ, ಪ್ರಾಂಶುಪಾಲ, ಗುರುಕುಲ ಪಿಯು ಕಾಲೇಜು