ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಅವರನ್ನು ಭಕ್ತಾದಿಗಳು ಸನ್ಮಾನಿಸಿ ಗೌರವಿಸಿದರು. ರೇಖಾ ಕಾಡಾದಿ, ಶ್ರೀದೇವಿ ಕೋರೆ, ಶೋಭಾವತಿ ನೀಲಂಗೆ, ಪ್ರಭಾವತಿ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 
ರಾಜ್ಯ

ಗುರುಗಳ ಮಾರ್ಗದರ್ಶನ ಅವಶ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ. ಶಿವಾನಂದ ಸ್ವಾಮೀಜಿ ನುಡಿ
  • ಹುಲಸೂರಿನಲ್ಲಿ ಗುರುಪೂರ್ಣಿಮೆ
  • ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ
ಹುಲಸೂರು: ಗುರುಗಳ ಮಾರ್ಗದರ್ಶನ ಪಡೆದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಭಾರತೀಯ ಸಂಸತಿಯಲ್ಲಿ ಗುರುಗಳಿಗೆ ಉನ್ನತವಾದ ಸ್ಥಾನವಿದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಶಿವಾನಂದೇಶ್ವರ ಭಜನಾ ಸಂಘದ ವತಿಯಿಂದ ಹಾಗೂ ಮಠದ ಭಕ್ತಾದಿಗಳಿಂದ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಕ್ತಾದಿಗಳ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು ಪೂಜ್ಯರು, ಅಜ್ಞಾನ ಕಳೆದು ಸುಜ್ಞಾನ ನೀಡುವವನೇ ನಿಜವಾದ ಗುರು ಆಗಿರುತ್ತಾನೆ. ಗುರು ಜ್ಞಾನದ ಭಂಡಾರ ವಾಗಿರುತ್ತಾನೆ. ಅವರು ಹೇಳುವ ಪ್ರತಿಯೊಂದು ಮಾತಿನಲ್ಲಿ ಅರ್ಥ ಇರುತ್ತದೆ ಸತ್ಕಾರ್ಯ ಮಾಡಬೇಕಾದರೆ ಗುರುಗಳ ಮಾರ್ಗದರ್ಶನ ಅವಶ್ಯಕತೆ ಎಂದರು.
ಬಸವಣ್ಣನವರ ಕಾಯಕ, ದಾಸೋಹ ಹಾಗೂ ಸಮಾನತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ನುಡಿದಂತೆ ನಡೆಯುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ವಕೀಲ ಬಾಲಾಜಿ ಆದೆಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಪ್ರಮುಖರಾದ ಶಿವಶಂಕರ ಪಾರಶೆಟ್ಟೆ, ಝರನಾಥ ರಾಠೋಡ್​, ಬಳಿರಾಮ ಮೋರೆ, ವೈಜಿನಾಥ ಕರಾಳೆ, ರಾಜಪ್ಪ ಮಾಳದೆ, ದಿಲೀಪ ಪಂಚಾಳ, ಸಂತೋಷಧಬಾಲೆ, ರೇಖಾ ಕಾಡಾದಿ, ಸಂಗೀತಾ ಸಾಯಿಗಾಂವ, ಶ್ರೀದೇವಿ ಕೋರೆ, ಶೋಭಾವತಿ ನೀಲಂಗೆ, ಪ್ರಭಾವತಿ ಸ್ವಾಮಿ, ಚನ್ನಮ್ಮ ಸ್ವಾಮಿ ಇತರರಿದ್ದರು. ಸಾಯಿಗಾಂವ, ಮೇಹಕರ, ಹಾಲಹಳ್ಳಿ, ತೊಗಲೂರು ಸೇರಿ ವಿವಿಧ ಗ್ರಾಮಗಳ ಭಕ್ತಾದಿಗಳು ಗುರುಗಳ ಆಶೀರ್ವಾದ ಪಡೆದರು.