ವಿಜಯಪುರದ ದೇವನಹಳ್ಳಿ ಮುಖ್ಯ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ಅಳವಡಿಸಲಾಗಿದ್ದ ರೇಲಿಂಗ್ಸ್ಗಳನ್ನು ಸರಿಪಡಿಸುತ್ತಿರುವುದು.
ವಿಜಯಪುರ : ಪಟ್ಟಣದ ದೇವನಹಳ್ಳಿ ರಸ್ತೆಯ ಗುಡುವನಹಳ್ಳಿ ಕೆರೆ ಏರಿ ಮೇಲೆ ವಾಹನಗಳ ಸುರಕ್ಷತೆಗಾಗಿ ಅಳವಡಿಸಿದ್ದ ಕಬ್ಬಿಣದ ರೇಲಿಂಗ್ಸ್ (ತಡೆಗೋಡೆ) ಸರಿಪಡಿಸಲಾಗಿದೆ.
ವಿಜಯಪುರ&ದೇವನಹಳ್ಳಿ ಮುಖ್ಯ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ಅಳವಡಿಸಲಾಗಿದ್ದ ರೇಲಿಂಗ್ಸ್ಗಳ ನೆಟ್-ಬೋಲ್ಟ್ಗಳು ಕಳ್ಳರ ಪಾಲಾಗಿ, ಸವಾರರ ಜೀವಕ್ಕೆ ಕುತ್ತು ತರುವಂತಿದ್ದ ಪರಿಸ್ಥಿತಿಯ ಬಗ್ಗೆ ಮಾ.3ರಂದು "ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೀಗ ದುರಸ್ತಿ ಪೂರ್ಣಗೊಳಿಸಿದ್ದಾರೆ.
ಏನಾಗಿತ್ತು?: ಕೆರೆ ಏರಿ ಮೇಲೆ ವಾಹನಗಳ ಸುರಕ್ಷತೆಗಾಗಿ ಹಾಕಲಾಗಿದ್ದ ಕಬ್ಬಿಣದ ರೇಲಿಂಗ್ಸ್ಗಳ ನೆಟ್ ಮತ್ತು ಬೋಲ್ಟ್ಗಳನ್ನು ಕಳ್ಳರು ಬಿಚ್ಚಿ ಸಾಗಿಸುತ್ತಿದ್ದರು. ಇದರಿಂದ ರೇಲಿಂಗ್ಸ್ಗಳು ಅಲುಗಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಕೆರೆಗೆ ವಾಹನಗಳು ಉರುಳುವ ಭೀತಿ ಎದುರಾಗಿತ್ತು. ಅಧಿಕಾರಿಗಳ ರ್ನಿಲಕ್ಷ$್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕೆಯು ವರದಿ ಮಾಡುವ ಮೂಲಕ ಇಲಾಖೆ ಗಮನ ಸೆಳೆದಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲ ದಿನಗಳಿಂದ ಕೆಲಸ ನಿರ್ವಹಿಸಿದ ಸಿಬ್ಬಂದಿ, ಕೆರೆ ಏರಿಯ ಸುಮಾರು ಒಂದು ಕಿಲೋಮೀಟರ್ಗೂ ಎರಡು ಬದಿಯ ರೈಲಿಂಗ್ಸ್ ಸರಿಪಡಿಸಿದ್ದಾರೆ.