ಕೆಂಭಾವಿ ಸಮೀಪ ಹೆಗ್ಗನದೊಡ್ಡಿದಲ್ಲಿ 60 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ್​, ಬಸನಗೌಡ ಚಿಂಚೋಳಿ, ಶಿವರಾಜ ಬೂದೂರ, ಎಸ್​ಕೆ ಕಲೀಮ್​ ಇತರರಿದ್ದರು 
ರಾಜ್ಯ

ಜನರ ಆರ್ಥಿಕ ಸ್ಥಿತಿ ಬಲಗೊಳಿಸಿದ ಗ್ಯಾರಂಟಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ
  • ಹೆಗ್ಗನದೊಡ್ಡಿಯಲ್ಲಿ 60 ಲಕ್ಷ ರೂ. ಕಾಮಗಾರಿಗೆ ಚಾಲನೆ
ಕೆಂಭಾವಿ: ಶಹಾಪುರ ಮತೇತ್ರದ ಪ್ರತಿ ಹಳ್ಳಿಗೂ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಹೇಳಿದರು.
ಹೆಗ್ಗನದೊಡ್ಡಿ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬಸ್​ ವ್ಯವಸ್ಥೆ, ದೇವಸ್ಥಾನಗಳ ಅಭಿವೃದ್ಧಿ ಸೇರಿ ಜನಪಯೋಗಿ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಅದರೊಂದಿಗೆ ನಮ್ಮ ಕಾಂಗ್ರೆಸ್​ ಸರ್ಕಾರದ ಐದು ಗ್ಯಾರಂಟಿ ಜನರ ಆರ್ಥಿಕ ಸ್ಥಿತಿ ಬಲಗೊಳಿಸಿದೆ ಎಂದರು.
ಕೆಂಭಾವಿಯ ಹಿರೇಮಠಕ್ಕೆ ರೂ.15 ಲಕ್ಷ, ನಗನೂರ ಸುಗೂರೇಶ್ವರ ಮಠಕ್ಕೆ ರೂ.15 ಹಾಗೂ ಪರಸನಹಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ರೂ.15 ಲಕ್ಷ, ಕೆಂಭಾವಿ ಪ್ರಮೋದ ಮಂದಿರಕ್ಕೆ ರೂ.10 ಲಕ್ಷ ಅನುದಾನ ಒದಗಿಸಲಾಗಿದೆ. ತಿಪ್ಪನೆಟಗಿ ಗ್ರಾಮದಲ್ಲಿ ಸಿಸಿ ರಸ್ತೆಗೆ ರೂ.50 ಲಕ್ಷ ಅನುದಾನ ನೀಡಲಾಗಿದೆ. ಮಾಲಗತ್ತಿ ಗ್ರಾಮದ ಸಿಸಿ ರಸ್ತೆಗೆ ರೂ.50 ಲಕ್ಷ, ಗೋಡ್ರಿಹಾಳ ಗ್ರಾಮದ ಸಿಸಿ ರಸ್ತೆಗೆ ರೂ.80 ಲಕ್ಷ ಹಾಗೂ ನೀರಿಗಾಗಿ ರೂ.10 ಲಕ್ಷ. ಕರಡಕಲ್​ ಗ್ರಾಮದ ಸಿಸಿ ರಸ್ತೆಗೆ ರೂ.63 ಲಕ್ಷ, ಕಿರದಳ್ಳಿ ಗ್ರಾಮದ ಸಿಸಿ ರಸ್ತೆಗೆ 1 ಕೋಟಿ ರೂ.(ಸಿಎಂಐಡಿ), ಪರಸನಹಳ್ಳಿಯ ಎರಡು ವಾರ್ಡ್​ಗಳಿಗೆ ರೂ.50 ಲಕ್ಷ ನೀಡಲಾಗಿದೆ. ಕೆಂಭಾವಿಯಲ್ಲಿ ಸಿಸಿ ರಸ್ತೆ ನಿರ್ಮಾಕ್ಕೆ ವಿಶೇಷ ಅನುದಾನ ರೂ.4 ಕೋಟಿ, ಪೊಲೀಸ್​ ವಸತಿ ಗೃಹಕ್ಕಾಗಿ ರೂ.3 ಕೋಟಿ ಹಾಗೂ ಆಜಾದ್​ ಶಾಲೆಗೆ ರೂ.5 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ್​, ಬಸನಗೌಡ ಚಿಂಚೋಳಿ, ಶಿವರಾಜ ಬೂದೂರ, ಅಮೀನರೆಡ್ಡಿ ಕಿರದಳ್ಳಿ, ಎಸ್​ಕೆ ಕಲೀಮ್​ ಇತರರಿದ್ದರು.