ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ಸಂಗನಬಸಯ್ಯ ಮಠ, ಮೋಹನ ಗುತ್ತೇದಾರ, ಅಜಮ್ತ ಕೇಶ್ವಾರ, ಮಸ್ತಾನ ಅಲಿ, ಸುರೇಶ ದಂಡಿನ, ಫಕ್ರೋದ್ದಿನ, ಮರೇಪ್ಪ, ಮೈನೋದ್ದಿನ, ಹಣಮಂತ ಭೋವಿ, ಇನಾಯಿತ್ ಅಲಿ, ಸೈದಪ್ಪ ವಾಡೆ, ಶಿವಕುಮಾರ ಗೋಣಿ, ಲಕ್ಷ್ಮಣ ಮುಸ್ತರಿ ಇತರರು ಇದ್ದರು.
- ಕೃಷಿ, ತೋಟಗಾರಿಕೆ ವಿಜ್ಞಾನಿಗಳ ತಂಡ ಶೀಘ್ರ ಸಂಶೋಧನೆಗೆ ಮುಂದಾಗಿ ಔಷಧಿ ಕಂಡು ಹಿಡಿಯಲಿ / ಕೃಷಿ, ತೋಟಗಾರಿಕೆ ಅಧಿಕಾರಿಗಳು ನಿಯಂತ್ರಣ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ನೀಡಲಿ
ಚಿಂಚೋಳಿ : ಕ್ಷೇತ್ರದಲ್ಲಿ ರೈತರ ಬದುಕು ಅತ್ಯಂತ ಚಿಂತಾಜನಕವಾಗಿದೆ. ನೆಟೆರೋಗ, ಗೊಡ್ಡು, ಇದೀಗ ತೊಗರಿ, ಉದ್ದು, ಹೆಸರು, ಈರುಳ್ಳಿ, ಕಬ್ಬು, ಇತ್ಯಾದಿ ನೀರಾವರಿ ಬೆಳೆಗಳಿಗೆ ಕಸ್ಕೊಟಾ ಕಳೆ ಆವರಿಸಿ ಬೆಳೆ ಹಾನಿಯಾಗಿ ಉತ್ತಮ ಇಳುವರಿ ಬಾರದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಬಸವರಾಜ ಮಾಲಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮಕ್ಕೆ ಗುರುವಾರದಂದು ಭೇಟಿ ನೀಡಿ ರೈತನ ತೊಗರಿ ಹೊಲವನ್ನು ವೀಕ್ಷಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರೆಡು, ಮೂರು ವರ್ಷಗಳಿಂದ ಕಸ್ಕೊಟಾ ಕಳೆ ಕಾಣುತ್ತಿದ್ದು, ಇದೀಗ ತೀವೃತೆ ಹೆಚ್ಚಾಗಿದೆ. ಗಾರಂಪಳ್ಳಿ, ಮರಪಳ್ಳಿ, ಅಣವಾರ, ಚಿಂಚೋಳಿ, ಸುಲೇಪೇಟ, ನಿಡಗುಂದಾ, ಶಿರೋಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕಸ್ಕೊಟಾ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಕೃಷಿ, ತೋಟಗಾರಿಕೆ ವಿಜ್ಞಾನಿಗಳು ಸಂಶೋಧನೆ ನಡೆಸಿ ಔಷಧಿ ಕಂಡು ಹಿಡಿಯಬೇಕು. ಕೃಷಿ ಅಧಿಕಾರಿಗಳು ಸಮಿಕ್ಷೆಗೆ ಮುಂದಾಗಬೇಕು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಕಸ್ಕೊಟಾ ನಿಯಂತ್ರಣ ಕ್ರಮಗಳ ಕುರಿತು ಜಾಗೃತಿ ವಾಹನಕ್ಕೆ ಚಾಲನೆ ನೀಡಿದ್ದು, ಕೃಷಿ ಅಧಿಕಾರಿಗಳು ಎಲ್ಲೆಡೆ ಸಂಚಾರ ನಡೆಸಿ ಜಾಗೃತಿಗೆ ಮುಂದಾಗಬೇಕು. ಕಸ್ಕೊಟಾ ಹಾನಿಯ ಕುರಿತು ಸರಕಾರದ ಗಮನ ಸೆಳೆಯುತ್ತೇನೆ. ನಮ್ಮ ಕಾಂಗ್ರೇಸ್ ಸರಕಾರ ರೈತರೊಂದಿಗೆ ಇದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾತನಾಡಿದರು.
ಅದೇ ರೀತಿ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಬಾಸೀದ, ಲಕ್ಷ್ಮಣ ಆವುಂಟಿ, ರೈತ ಹೋರಾಟಗಾರ ಗೋಪಾಲ ಗಾರಂಪಳ್ಳಿ, ಬಸವರಾಜ ದೇಶಮುಖ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ಸಂಗನಬಸಯ್ಯ ಮಠ, ಮೋಹನ ಗುತ್ತೇದಾರ, ಅಜಮ್ತ ಕೇಶ್ವಾರ, ಮಸ್ತಾನ ಅಲಿ, ಸುರೇಶ ದಂಡಿನ, ಫಕ್ರೋದ್ದಿನ, ಮರೇಪ್ಪ, ಮೈನೋದ್ದಿನ, ಹಣಮಂತ ಭೋವಿ, ಇನಾಯಿತ್ ಅಲಿ, ಸೈದಪ್ಪ ವಾಡೆ, ಶಿವಕುಮಾರ ಗೋಣಿ, ಲಕ್ಷ್ಮಣ ಮುಸ್ತರಿ ಇತರರು ಇದ್ದರು.