ಬಸವಕಲ್ಯಾಣದ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯ ಧನರಾಜ ತಾಳಂಪಳ್ಳಿ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ ಅವರನ್ನು ಸನ್ಮಾನಿಸಲಾಯಿತು. ಕೆಎಂಎಫ್ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಪಂಡಿತರಾವ ಚಿದ್ರಿ, ಬಂಡೆಪಪ್ಪ ಮೇತ್ರೆ ಇದ್ದರು.
- ಎಚ್.ಎಂ.ರೇವಣ್ಣ ಅಭಯ
- ಬಸವಕಲ್ಯಾಣದಲ್ಲಿ ಸನ್ಮಾನ ಗ್ಯಾರಂಟಿ ಯೋಜನೆ ನಿರಂತರ
ಬಸವಕಲ್ಯಾಣ: ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ. ಇವು ಮುಂದುವರಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಮಂಗಳವಾರ ನಗರದ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ಸುವಸ್ಥಿತ ಸಂಪರ್ಕ ಕಚೇರಿ ನಿರ್ವಹಣೆ ಮಾಡಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಪರಿಶೀಲಿಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದು, ಬೀದರ್ ಜಿಲ್ಲೆಯಲ್ಲಿ ಯೋಜನೆಗಳು ಉತ್ತಮ ರೀತಿಯಲ್ಲಿ ಶೇ.98ರಷ್ಟು ಜನರಿಗೆ ತಲುಪುತ್ತಿವೆ. ಆದರೆ ಪರಿಶೀಲನೆ ಸಮಯದಲ್ಲಿ ಮೃತಪಟ್ಟ ಕೆಲವರ ಬ್ಯಾಂಕ್ ಖಾತೆಗೂ ಹಣ ಜಮಾ ಅಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಕೆಲವೆಡೆ ಗೃಹ ಬಳಕೆ ಮಾತ್ರವಲ್ಲದೆ ವಾಣಿಜ್ಯ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಅಂತಹವರನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಸಿಗಬೇಕು. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವರರ ಮಾಹಿತಿ ಕಲೆ ಹಾಕಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗೆ 1.38 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಮಧ್ಯವರ್ತಿಗಳಿಲ್ಲದೇ ಜನರಿಗೆ ನೇರವಾಗಿ ಯೋಜನೆ ಲಾಭ ತಲುಪಿಸಲಗುತ್ತಿದೆ. ಗ್ರಾರಂಟಿ ಯೋಜನೆಗಳ ನಿಲ್ಲಿಸುವದಿಲ್ಲ. ಪರಿಷ್ಕರಣೆ ಮಾತ್ರ ಮಾಡಲಾಗುತ್ತಿದೆ. ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು, ಅರ್ಹರಿಗೆ ಯೋಜನೆಯ ಲಾಭ ತಲುಪಿಸಲಾಗುತ್ತಿದೆ. ಈ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ವ್ಯವಸ್ಥಿತವಾಗಿ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ಕುರುಬರ ಸಂದ ನಿರ್ದೇಶಕ ಬಂಡೆಪ್ಪ ಮೇತ್ರೆ ಪ್ರಾಸ್ತಾವಿಕ ಮಾತನಾಡಿದರು.
ಕೆಎಂಎಫ್ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಮುಖಂಡ ಪಂಡಿತರಾವ ಚಿದ್ರಿ, ಪ್ರಮುಖರಾದ ರಾಜನ್ ಚೌಧರಿ, ಸದಾನಂದ ಹಳ್ಳೆ, ಯಾಯಾಪಾಶಾ, ರಾಜಕುಮಾರ ಘಾಳೆ, ಉಮೇಶ ಶೀಲವಂತ, ಅನೀಲ ಮಾಶೆಟ್ಟಿ ಹಾಗೂ ಕಾರ್ಯಕರ್ತರು ಇದ್ದರು.