ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಔರಾದ್​ ತಾಲೂಕಿನ ಸಂತಪುರ ಗ್ರಾಪಂ ಆವರಣದಲ್ಲಿ ಸಸಿ ನೆಟ್ಟು ಗೃಹಲಕ್ಷ್ಮಿದಿನ ಆಚರಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚನ್ನಪ್ಪ ಉಪ್ಪೆ, ತಾಪಂ ಇಒ ಕಿರಣ ಪಾಟೀಲ್​, ಎಡಿ ಶಿವಕುಮಾರ ಘಾಟೆ, ಪಿಡಿಒ ಸಂತೋಷ ಪಾಟೀಲ್​, ಸತೀಶ ಕುಮಾರ, ಶಿವಕುಮಾರ ಪಾಟೀಲ್​, ಸಲ್ಲಾವುದ್ದಿನ್​ ಜಂಬ ಇತರರಿದ್ದರು. 
ರಾಜ್ಯ

ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಗೃಹಲಕ್ಷ್ಮಿ ಆಸರೆ

ಪ್ರಮುಖ ಮುಖ್ಯಾಂಶಗಳು

  • ಚನ್ನಪ್ಪ ಉಪ್ಪೆ ಅಭಿಮತ
  • ಸಂತಪುರದಲ್ಲಿ ಕಾರ್ಯಕ್ರಮ
ಔರಾದ್​: ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿದ್ದು, ಗೃಹಲಕ್ಷ್ಮಿಯೋಜನೆಯು ಮಹಿಳೆಯರ ಸ್ವಾವಲಂಬನೆಗೆ ಹೊಸ ದಿಕ್ಕು ತೋರಿಸಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚನ್ನಪ್ಪ ಉಪ್ಪೆ ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ತಾಲೂಕಿನ ಸಂತಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ನೆಟ್ಟು ಗೃಹಲಕ್ಷ್ಮಿ ದಿನ ಆಚರಿಸಿ ಮಾತನಾಡಿದ ಅವರು,  ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡುವುದರ ಮೂಲಕ  ಸಾರ್ವಜನಿಕರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಲಾಭ ಪಡೆದುಕೊಳ್ಳುಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್​ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿವೆ. ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದು, ಕುಟುಂಬದ ನಿರ್ವಹಣೆಯಲ್ಲಿ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದ್ದಾರೆ ಎಂದು ಹೇಳಿದರು.
 ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಉ) ಶಿವಕುಮಾರ ಘಾಟೆ, ಪಿಡಿಒ ಸಂತೋಷ ಪಾಟೀಲ್​, ಸದಸ್ಯರಾದ ಶಿವಕುಮಾರ ಪಾಟೀಲ್​, ಸಲ್ಲಾವುದ್ದಿನ್​ ಜಂಬಗಿ ಇತರರಿದ್ದರು.