ಮುಗಳಖೋಡ ಪಟ್ಟಣದಲ್ಲಿ ಅಚ್ಚಪ್ಪ ಬೆಳಗಲಿ ಕುಟುಂಬದವರಿಂದ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಡಾ.ಸಿ.ಬಿ.ಕುಲಿಗೋಡ, ಡಾ.ಸಿ.ಆರ್​.ಗುಡಿಸಿ, ಬಸಗೌಡ ಆಸಂಗಿ ಇತರರಿದ್ದರು. 
ರಾಜ್ಯ

ಉತ್ತಮ ಇಳುವರಿಯ ಕಬ್ಬು ಬೆಳೆಸಿ: ಕೃಷಿಕರಿಗೆ ಡಾ.ಪ್ರಭಾಕರ ಕೋರೆ ಸಲಹೆ

ಮುಗಳಖೋಡ: ರೈತರು ಆಧುನಿಕ ತಂತ್ರಜ್ಞಾನ ಬಳಸಿ ಕಬ್ಬು ಬೆಳೆದು, ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಕಾಹೆರ್​ ಕುಲಾಧಿಪತಿ, ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಹೇಳಿದರು.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಯುವ ಮುಖಂಡ ಅಲ್ಲಪ್ಪ ಬೆಳಗಲಿ ಅವರ ಾಮ್​ರ್ ಹೌಸ್​ನಲ್ಲಿ ಶಿವಶಕ್ತಿ ಶುಗರ್ಸ್​ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತರ ಮಕ್ಕಳ ಉನ್ನತ ಶಿಣಕ್ಕೆ ಕೆಎಲ್​ಇ ಸಂಸ್ಥೆ ಆದ್ಯತೆ ನೀಡುತ್ತಿದ್ದು, ತೆನಿಕೊಳ್ಳದಲ್ಲಿ ಕೃಷಿ ಮಹಾವಿದ್ಯಾಲಯ ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೃಷಿ ಶಿಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಬೆಳೆಗಳ ಪ್ರಾತ್ಯಕೆ, ಮಣ್ಣಿನ ಆರೋಗ್ಯ, ನೀರಿನ ಸಮರ್ಪಕ ಬಳಕೆ ಬೆಳೆ ಸಂರಣೆ ಹಾಗೂ ಸುಧಾರಿತ ಕೃಷಿ ತಂತ್ರಜ್ಞಾನ ಕುರಿತು ರೈತರಿಗೆ ಪ್ರಾಯೋಗಿಕ ತರಬೇತಿ ನೀಡಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಾಗುತ್ತದೆ. ವಿಜ್ಞಾನ ಕೇಂದ್ರದಲ್ಲಿ ತರಬೇತಿಗೆ ಆಗಮಿಸುವ ರೈತರಿಗೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದರು.
ನೀರಾವರಿ ಬೆಳೆ ವಿಮೆ ಮಾರುಕಟ್ಟೆ ವ್ಯವಸ್ಥೆ ಉತ್ಪಾದನಾ ವೆಚ್ಚ ತಾಂತ್ರಿಕ ಮಾರ್ಗದರ್ಶನ ಸೇರಿದಂತೆ ವಿವಿಧ ವಿಷಯಗಳ ಕುರಿತು ರೆತರ ಪ್ರಶ್ನೆಗೆ ಉತ್ತರಿಸಿದ ಡಾ. ಪ್ರಭಾಕರ ಕೋರೆ ಕಷಿ ೇತ್ರದಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಲಿತಾಂಶಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೆಎಲ್​ಇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂದ ನಿಕಟಪೂರ್ವ ಅಧ್ಯ ಡಾ.ಸಿ.ಬಿ.ಕುಲಿಗೋಡ ಮಾತನಾಡಿ, ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಶಿಣ, ವೈದ್ಯಕಿಯ ೇತ್ರ, ಕೃಷಿ, ಸಕ್ಕರೆ ಉದ್ಯಮದ ಜತೆಗೆ ಸಹಕಾರ ಸಂ&ಸಂಸ್ಥೆಗಳ ೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿದ ಅವರು ಆಧುನಿಕ ಬಸವಣ್ಣ ಆಗಿದ್ದಾರೆ ಎಂದು ಬಣ್ಣಿಸಿದರು.
ಡಾ.ಸಿ.ಆರ್​.ಗುಡಿಸಿ ಮಾತನಾಡಿದರು. ಅಲ್ಲಪ್ಪ ಬೆಳಗಲಿ ಕುಟುಂಬದಿಂದ ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಬಸಗೌಡ ಆಸಂಗಿ, ಡಾ.ಚಂದ್ರಶೇಖರ ಗುಡಸಿ, ರಾಯಗೌಡ ಖೇತಗೌಡರ, ಮುರೆಪ್ಪ ಹೊಸೂರ, ಪರಗೌಡ ಖೇತಗೌಡರ, ಚೇತನ ಯಡವಣ್ಣವರ, ಮಹಾಂತೇಶ ಯರಡತ್ತಿ, ಹಾಲಪ್ಪ ಶೇಗುಣಸಿ, ಭೀಮಶಿ ಬನಶಂಕರಿ, ರಾಜು ನಾಯಿಕ, ಶಿವಾನಂದ ಮೆಕ್ಕಳಕಿ, ಅಲ್ಲಪ್ಪ ಬೆಳಗಲಿ, ಅಚ್ಚಪ್ಪ ಬೆಳಗಲಿ, ಉಮೇಶ ಹೊಸತೋಟ, ಸದಾಶಿವ ಬೆಳಗಲಿ, ಗಿರಮಲ್ಲ ಗೋಕಾಕ, ಸಿದ್ದಪ್ಪ ನಾವಿ ಶಿವಪ್ಪ ಮುಗಳಿ, ಗಜಾನಂದ ಜಂಬಗಿ, ರಮೇಶ ಯರಡತ್ತಿ, ವಿಠ್ಠಲ ಕುರಿಬನಿ, ರಮೇಶ ಹಿಪ್ಪರಗಿ, ಗೋಪಾಲ ಗೋಕಾಕ, ಕೃಷ್ಣರಾವ ನಾಯಿಕ, ಮುತ್ತಪ್ಪ ಬಾಳೋಜಿ ಇತರರಿದ್ದರು. ಪತ್ರಕರ್ತ ಸುನೀಲ ಕಬ್ಬೂರ ನಿರೂಪಿಸಿದರು. ಸಂತೋಷ ಅರಬಾವಿ ವಂದಿಸಿದರು.