ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಶಿವಣ್ಣ ಮಾತನಾಡಿದರು. ಬಮುಲ್ ನಿರ್ದೇಶಕ ಆರ್. ಕೆ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯರಾದ ದೊಡ್ಡಹಾಗಡೆ ಹರೀಶ್, ರುಪತಿ ರೆಡ್ಡಿ ಇತರರು ಇದ್ದರು.
ಆನೇಕಲ್ : ತಾಲೂಕಿನ ಇಂಡ್ಲವಾಡಿ ಗ್ರಾಮದ ಸೂರ್ಯ ಸಿಟಿ ನಾಲ್ಕನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾ ರಾಷ್ಟ್ರೀಯ ಕ್ರೀಡಾಂಗಣ ಕಾಮಗಾರಿಗೆ ಮೇ 23ರಂದು ಭೂಮಿ ಪೂಜೆ ನಡೆಯಲಿದ್ದು, ಒಂದು ಲಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.
ತಾಲೂಕಿನ ಚಂದಾಪುರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಭಾಗವಹಿಸಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ತಾಲೂಕು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಆಗಲಿದೆ. ದೇಶದಲ್ಲೆ 2ನೇ ಅತಿ ದೊಡ್ಡ ಕ್ರೀಡಾಂಗಣ ಹಾಗೂ 24 ಕ್ರೀಡೆಗಳಿಗೆ ಒಂದೇ ಕಡೆ ಅವಕಾಶ ಸಿಗಲಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಲಿದೆ. ಕ್ರಿಕೆಟ್ ಜತೆಗೆ 30 ಕ್ರೀಡೆಗಳ ಕ್ರೀಡಾ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಕ್ರೀಡಾಂಗಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಅವಶ್ಯ ಇರುವ ಮೂಲ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗಿದೆ ಎಂದರು.
ವಸತಿ ರಹಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮೇ 23ರಂದು ಲಾಟರಿ ಮೂಲಕ ನಾಲ್ಕು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು. ಮುಖಂಡರಾದ ಎನ್.ಎಸ್. ಪದ್ಮನಾಭ, ಬಳ್ಳೂರು ಮುನಿವೀರಪ್ಪ, ಗಟ್ಟಹಳ್ಳಿ ಸೀನಪ್ಪ, ಶಂಕರ್ ರೆಡ್ಡಿ, ಸುಶೀಲಮ್ಮ, ಸ್ವಾತೇಗೌಡ, ಚಿನ್ನಪ್ಪ, ಬೆಸ್ತಮಾನಹಳ್ಳಿ ಯಲ್ಲಪ್ಪ, ಅರೇಹಳ್ಳಿ ಮಧು, ಗೋಪಾಲರೆಡ್ಡಿ, ಪುಷ್ಪರಾಜು, ಮನೋಹರ್ ಇದ್ದರು.