ವಿಜಯಪುರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು. ಎಂ.ಎಸ್. ಕರಡಿ, ಜವಾಹರ ಗೋಸಾವಿ, ಅಶೋಕ ನ್ಯಾಮಗೌಡ ಮತ್ತಿತರರಿದ್ದಾರೆ. 
ರಾಜ್ಯ

ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಮಾರುತಿ ತಳ್ಳಳ್ಳಿ

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿ, ಸಾರ್ವಜನಿಕರ ಅಹವಾಲು ಆಲಿಸಿದರು.

ನಗರದ ವಾರ್ಡ್ ನಂ. 8 ರ ವ್ಯಾಪ್ತಿಯಲ್ಲಿನ ಉಪ್ಪಲಿ ಬುರುಜ್ ಬಳಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಹಂತ-2ರಲ್ಲಿ ಮಂಜೂರಾದ 1.5 ಕೋಟಿ ರೂ. ಅನುದಾನದಲ್ಲಿ ಉಪ್ಪಲಿ ಬುರುಜ್‌ದಿಂದ ಚಂದಾಬಾವಡಿವರೆಗೆ, ಹೂವಿನ ಮಾರುಕಟ್ಟೆಯಿಂದ ಜೀನಗಾರ ಗಲ್ಲಿ ಕೂಡುವ ರಸ್ತೆವರೆಗೆ ಹಾಗೂ ಇತರೆ ಆಂತರಿಕ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ಲಿಂಗದ ಗುಡಿ ರಸ್ತೆಯಲ್ಲಿರುವ ಕೋಟೆಗೋಡೆ ಹತ್ತಿರ 70 ಲಕ್ಷ ರೂ. ಅನುದಾನದಲ್ಲಿ ಮಳೆ ನೀರು ಚರಂಡಿ ಹಾಗೂ ಸಿಡಿ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿದ ಶಾಸಕರು ನಂತರ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಉಪಮೇಯರ್ ಸುಮಿತ್ರಾ ಜಾಧವ, ಸದಸ್ಯರಾದ ರಾಜು ಮಗಿಮಠ, ಶಿವರುದ್ರ ಬಾಗಲಕೋಟೆ, ರಾಹುಲ್ ಜಾಧವ, ಜವಾಹರ ಗೋಸಾವಿ, ಅಶೋಕ ನ್ಯಾಮಗೌಡ, ಮುಖಂಡರಾದ ರಾಜೇಶ ದೇವಗಿರಿ, ಲಕ್ಷ್ಮಣ ಜಾಧವ, ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪ್ ಸೊಸೈಟಿ ನಿರ್ದೇಶಕ ವಿಜಯಕುಮಾರ ಚವಾಣ್ ಮತ್ತಿತರರಿದ್ದರು.