ಗುಳೇದಗುಡ್ಡದ ಜಂಗಮ ಸಮಾಜದ ವತಿಯಿಂದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಮುರುಘಾಮಠದ ಕಾಶೀನಾಥ ಸ್ವಾಮಿಗಳು, ಶಿವನಯ್ಯ ಮಳ್ಳಿಮಠ, ಪಡದಯ್ಯ ಕಕ್ಕಯ್ಯನಮಠ, ವಿಶ್ವನಾಥ ಹಿರೇಮಠ ಇತರರಿದ್ದರು. 
ರಾಜ್ಯ

ಭವನ ನಿರ್ಮಾಣಕ್ಕೆ ಅನುದಾನದ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಬಿ. ಚಿಮ್ಮನಕಟ್ಟಿ ಭರವಸೆ
  • 10 ಲಕ್ಷ ರೂ. ಅನುದಾನ
ಗುಳೇದಗುಡ್ಡ: ಜಂಗಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ 5 ಲಕ್ಷ ರೂ. ಅನುದಾನ ನೀಡಲಾಗುವುದು ಬಳಿಕ ಎರಡನೇ ಕಂತಿನಲ್ಲಿ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಭರವಸೆ ನೀಡಿದರು.
ಪಟ್ಟಣದಲ್ಲಿ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ತಾಲೂಕು ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ವರು ಮಾತನಾಡಿದರು.
ಮುರುಘಾಮಠದ ಕಾಶೀನಾಥ ಸ್ವಾಮಿಗಳು, ಸಂಸ್ಥೆ ಅಧ್ಯಕ್ಷ ಶಿವನಯ್ಯ ಮಳ್ಳಿಮಠ, ಪಡದಯ್ಯ ಕಕ್ಕಯ್ಯನಮಠ, ವಿಶ್ವನಾಥ ಹಿರೇಮಠ, ಪ್ರಭು ತಟ್ಟಿಮಠ, ಉಮೇಶ ಶಿವನಗೌಡರ, ಶ್ರೀಕಾಂತ ಸರಗಣಾಚಾರಿ, ಮಹಾಂತೇಶ ಹಿರೇಮಠ, ಸಂಗಯ್ಯ ಹಿರೇಮಠ ಇತರರಿದ್ದರು.