ಹುಲಸೂರು ತಾಲೂಕಿನ ಮಹಾರಾಷ್ಟ್ರ ಗಡಿ ಭಾಗದ ಕೋಟಮಾಳ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಮಂಗಳವಾರ ಮಹಾಲಕ್ಷಿ$್ಮ ಜಾತ್ರಾ ಮಹೋತ್ಸವದ ನಿಮಿತ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.  
ರಾಜ್ಯ

ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಅದ್ದೂರಿ

ಹುಲಸೂರು: ಮಹಾರಾಷ್ಟ್ರ ಗಡಿ ಭಾಗದ ಕೋಟಮಾಳ ಗ್ರಾಮದಲ್ಲಿ ಮಂಗಳವಾರ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ಅರ್ಚಕರು ವಿಶೇಷ ಪೂಜೆ ನಡೆಸಿದರು. ದೇಶದಲ್ಲಿ ಶಾಂತಿ, ನೆಮ್ಮದಿ, ಸಕಾಲಕ್ಕೆ ಮಳೆ, ಸಮೃದ್ಧ ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಕಳೆದ ನಾಲ್ಕು ದಿನದಿಂದ ಪ್ರತಿದಿನ ರಾತ್ರಿ ಗ್ರಾಮದ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ದೇವಸ್ಥಾನದಲ್ಲಿ ಮಹಿಳೆಯರು, ಮಕ್ಕಳು ಸೇರಿ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಸಾಲಾಗಿ ಬಂದು ದೇವಿಯ ದರ್ಶನ ಪಡೆದು ಪುನೀತರಾದರು. ಅರ್ಚಕ ಪಾಂಡುರಂಗ ಪೂಜಾರಿ ಪ್ರಮುಖರಾದ ವಿಠ್ಠಲ ಪಾಟೀಲ, ನರಸಿಂಗ ಪಾಟೀಲ, ವೆಂಕಟರಾವ ಪಾಟೀಲ, ರಿತೇಶ ಪಾಟೀಲ, ವಿನೋದ ಗೌಂಡಗಾವೆ, ಸಂಕೇತ ಪಾಟೀಲ, ಅಭಿಷೇಕ, ಬಬಿತಾ ಪಾಟೀಲ್​, ಪೂಜಾ ಗೌಂಡಗಾವೆ, ದೀಪಾ ಪಾಟೀಲ, ಅನಿತಾ ಪಾಟೀಲ, ಪಾರ್ವತಿ ಇತರರು ಭಾಗವಹಿಸಿದ್ದರು.