ಕೆಂಭಾವಿ ಪಟ್ಟಣದ ವಿನಾಯಕ ಪ್ರಥಮ ಆಸ್ಪತ್ರೆಯಿಂದ ಗಣೇಶ ಮೂರ್ತಿಯನ್ನು ವಿವಿಧ ಸಂಘಗಳಿಗೆ ಉಚಿತವಾಗಿ ವಿತರಿಸಲಾಯಿತು. ಆಸ್ಪತ್ರೆಯ ಮುಖ್ಯಸ್ಥ ಡಾ.ದಯಾನಂದ ಡಿಗ್ಗಾವಿ, ಡಾ.ಚನ್ನಬಸ್ಸು, ಬಂದೇನವಾಜ ನಾಲತವಾಡ, ನರಸಿಂಹರೆಡ್ಡಿ, ಸಚಿನ್ ಇತರರಿದ್ದರು. 
ರಾಜ್ಯ

ಸಂಭ್ರಮದ ಗಣೇಶ ಪ್ರತಿಷ್ಠಾಪನೆ

ಪ್ರಮುಖ ಮುಖ್ಯಾಂಶಗಳು

  • ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು
ಹುಣಸಗಿ: ಪಟ್ಟಣ ಸೇರಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿಘ್ನವಿನಾಯಕನನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಯಿತು. ಪಟ್ಟಣದ ವಿವಿಧ ವಾರ್ಡ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳ ವತಿಯಿಂದ ಆರ್ಕಷಕವಾಗಿ ಅಲಂಕರಿಸಿದ ಮಂಟಪಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಗಣೇಶ ಮೂರ್ತಿಗಳ ಆಗಮನದ ಹಿನ್ನೆಲೆಯಲ್ಲಿ ಯುವಕರು, ಮಕ್ಕಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಡೊಳ್ಳು, ತಾಳಮದ್ದಳೆ ಹಾಗೂ ವಿವಿಧ ವಾದ್ಯಗಳ ನಾದದೊಂದಿಗೆ ಗಣಪತಿ ಬಪ್ಪಾ ಮೋರಿಯಾ ಘೋಷಣೆ ಮೊಳಗಿದವು. ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಆರತಿ ನೆರವೇರಿಸಿ ಭಕ್ತರು ದೇವರ ದರ್ಶನ ಪಡೆದರು.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಗಣೇಶ ಮಂಟಪಗಳು ವಿದ್ಯುತ್ ದೀಪಾಲಂಕಾರ ಮತ್ತು ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಲವು ಗಣೇಶೋತ್ಸವ ಸಮಿತಿ ಗಣೇಶೋತ್ಸವದ ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂತು.

ಭಕ್ತರನ್ನು ಆಕರ್ಷಿಸುತ್ತಿರುವ ವಿದ್ಯಾಪ್ರದಾಯಕ ಗಣಪ

ಪಟ್ಟಣ ಸೇರಿ ವಲಯದ ಹಲವೆಡೆ ಸೋಮವಾರದಿಂದ ಗಣೇಶ ಚತುರ್ಥಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಹಲವು ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಧಾರ್ಮಿಕ ವಿಧಿ ವಿಧಾನದ ಮೂಲಕ ವಿಘ್ನ ನಿವಾರಕನಿಗೆ ಪೂಜೆ ನೆರವೇರುತ್ತಿದೆ.
ಪಟ್ಟಣದಲ್ಲಿ ಸುಮಾರು ೨೦ರಿಂದ ೨೫ ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಂಡಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಉತ್ತರಾದಿ ಮಠ, ಮುಖ್ಯ ಬಜಾರ, ಗೌಡರ ಓಣಿ, ಕಾಡಾ ಕ್ಯಾಂಪ್, ಹಿಲ್‌ಟಾಪ್ ಕಾಲೋನಿ, ಮ್ಯಾಗೇರಿ, ಸಂಜೀವನಗರ, ಸಿದ್ದೇಶ್ವರ ದೇವಸ್ಥಾನ, ದೇವೂರ ಲೇಔಟ್, ಲಕ್ಷ್ಮೀ ನಗರ, ಸಾಯಿ ನಗರ ಸೇರಿದಂತೆ ಇನ್ನುಳಿದ ಕೆಲವು ಬಡಾವಣೆಗಳಲ್ಲಿ ವಿವಿಧ ಭಂಗಿಯ ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.
ಪಟ್ಟಣದ ಉತ್ತರಾದಿ ಮಠದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸತ್ಯಪ್ರಮೋದ ಯುವ ಸೇನೆಯಿಂದ ಪ್ರತಿಷ್ಠಾಪನೆಗೊಂಡಿರುವ ವಿದ್ಯಾಪ್ರದಾಯಕ ಗಣಪತಿ ಭಕ್ತರನ್ನು ಆಕರ್ಷಿಸುತ್ತಿದೆ. ಈ ಗಣಪತಿಯನ್ನು ನೋಡಲು ಜನತೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದು ಐದು ದಿನದ ಗಣೇಶೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸ, ಹರಿಕಥಾಮೃತ ಪಾರಾಯಣ, ಭಜನೆ, ನಾಟಕ, ಚಿಣ್ಣರ ನೃತ್ಯ, ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಆಟಗಳು ಸೇರಿ ಹಲವು ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.