ಡಾ.ಗುರುಪಾದಲಿಂಗ ಶ್ರೀ 
ರಾಜ್ಯ

ಅನುಷ್ಠಾನ ಮಹಾಮಂಗಳೋತ್ಸವ 8ರಂದು

ಪ್ರಮುಖ ಮುಖ್ಯಾಂಶಗಳು

  • ಮುತ್ಯಾನ ಬಬಲಾದ್​ನಲ್ಲಿ ಲೋಕಕಲ್ಯಾಣಾರ್ಥ ಡಾ.ಗುರುಪಾದಲಿಂಗ ಶ್ರೀ 48 ದಿನ ತಪ
ಕಮಲಾಪುರ: ಮುತ್ಯಾನ ಬಬಲಾದ್​ನಲ್ಲಿ ಮೌನಯೋಗಿ, ಕೃಷಿ ಪಂಡಿತ ಶ್ರೀ ಡಾ.ಗುರುಪಾದಲಿಂಗ ಶಿವಯೋಗಿಗಳ ತಪೋ ಅನುಷ್ಠಾನ ಮಹಾಮಂಗಳೋತ್ಸವ ಜು.8ರಂದು ಸಂಭ್ರಮದಿಂದ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.
ಅಧಿಕ ಪ್ರಥಮ ಅಮಾವಸ್ಯೆಯಂದು ಲೋಕಕಲ್ಯಾಣಾರ್ಥವಾಗಿ ದೇವಿ ಸಾನ್ನಿಧ್ಯದಲ್ಲಿ ಶ್ರೀ ಡಾ.ಗುರುಪಾದಲಿಂಗ ಶಿವಯೋಗಿಗಳು ಅನುಷ್ಠಾನ ಆರಂಭಿಸಿದ್ದರು. 48 ದಿನಗಳ ಕಾಲ ದೇವಿಯ ಆರಾಧನೆ ಮಾಡಿದ್ದಾನೆ. ಜು.6, 7ರಂದು ಸಂಜೆ 8ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಖೇಳಗಿಯ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಡಿವಾಳಯ್ಯ ಶಾಸಿ ಜೇರಟಗಿ ಪುರಾಣ ನೀಡುವರು, ಯಶ್ವಂತ ಬಡಿಗೇರ ಸಂಗೀತ, ರಾಜಶೇಖರ ಕಟ್ಟಿಸಂಗಾವಿ ತಬಲಾ ಸಾಥ್​ ನೀಡುವರು.
ಜು.8ರಂದು ಅನುಷ್ಠಾನ ಮಂಗಲ ನಡೆಯಲಿದ್ದು, ಬೆಳಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನೆರವೇರಲಿದೆ. ಬೆಳಗ್ಗೆ 10ಕ್ಕೆ ಧರ್ಮಸಭೆ ಜರುಗಲಿದ್ದು, ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚವದಾಪುರಿ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಖೇಳಗಿಯ ಶ್ರೀ ಶಿವಲಿಂಗ ಸ್ವಾಮೀಜಿ, ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಚಿಂಚಿಣಿಯ ಶ್ರೀ ಶಿವಪ್ರಸಾದ ದೇವರು, ಅವರಾದ್​ (ಬಿ) ಶ್ರೀ ನಿಂಗಪ್ಪ ಮುತ್ಯಾ ಉಪಸ್ಥಿತರಿರುವರು. ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಕೆಕೆಆರ್​ಡಿಬಿ ಅಧ್ಯ ಡಾ.ಅಜಯಸಿಂಗ್​, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಆರ್​.ಪಾಟೀಲ್​, ಅಲ್ಲಮಪ್ರಭು ಪಾಟೀಲ್​, ಸಿದ್ದು ಪಾಟೀಲ್​, ವಿಧಾನ ಪರಿಷತ್​ ಸದಸ್ಯ ಬಿ.ಜಿ ಪಾಟೀಲ್​, ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್​ ಸೇಡಂ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ಸುಭಾಷ ಗುತ್ತೇದಾರ್​, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯ ಶರಣು ಮೋದಿ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಕೋರಿದೆ.