ಅರಸೀಕೆರೆಯಲ್ಲಿ ಪ್ರತಿಷ್ಠಾಪಿಸಲಾ ಗಿರುವ ಬಜಾರ್ ಗಣಪತಿಯನ್ನು ವಿಶೇಷವಾಗಿ ಅಂಕರಿಸಿರುವುದು.
- ಪ್ರಸಿದ್ಧ ಬಜಾರ್ ಗಣಪತಿ ವಿಸರ್ಜನಾ ಮಹೋತ್ಸವ
- ಪಂಡಿತ್ ಅಖಿಲೇಶ್ ಗುರೂಜಿ ನೇತೃತ್ವ
ಅರಸೀಕೆರೆ: ನಗರದ ಪ್ರಸಿದ್ಧ ಬಜಾರ್ ಗಣಪತಿ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಹಾ ಮಂಗಳಾರತಿ ನಂತರ ಪುಷ್ಪ ಅಲಂಕೃತವಾದ ಭವ್ಯ ಮಂಟಪದಲ್ಲಿ ಗಣಪತಿ ಕೂರಿಸಿ ಪಂಡಿತ್ ಅಖಿಲೇಶ್ ಗುರೂಜಿ ನೇತೃತ್ವದಲ್ಲಿ 108 ದೀಪಗಳ ಮಹಾ ಆರತಿ ಬೆಳಗಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪೇಟೆಬೀದಿ, ರಾಷ್ಟ್ರೀಯ ಹೆದ್ದಾರಿ, ಸಾಯಿನಾಥ ರಸ್ತೆ ಸೇರಿದಂತೆ ವಿವಿಧೆಡೆ ಮೆರವಣಿಗೆ ಸಾಗಿತು.
ಕೊಯಮತ್ತೂರಿನ ವಿಷ್ಣು ಟ್ಯಾಬ್ಲೊ, ಮಹಾರಾಷ್ಟ್ರ ದಿಂದ ಆಗಮಿಸಿದ್ದ ಅಗೋರಿ ಪ್ರದರ್ಶನ, ಕಾಳಿವೇಷ, ಗುಬ್ಬಿ ವೀರಗಾಸೆ, ಕೇರಳದ ಚಂಡೆ ವಾದ್ಯ, ಸಂಗೀತ ಕಲಾತಂಡ, ತಮಟೆ, ಕರಡೆ ವಾದ್ಯ, ಫ್ಲವರ್ ಬ್ಲಾಸ್ಟರ್ ಒಳಗೊಂಡಂತೆ ಹಲವು ತಾರಮೇಳ ಎಲ್ಲರ ಗಮನ ಸೆಳೆಯಿತು. ಬಸವೇಶ್ವರ ವೃತ್ತದಲ್ಲಿ ವಿಶೇಷ ಆಕರ್ಷಣೀಯ ಪಟಾಕಿಗಳ ಪ್ರದರ್ಶನ ಹಾಗೂ ಭಾರಿ ಮದ್ದು ಗುಂಡುಗಳ ಪ್ರದರ್ಶನದೊಂದಿಗೆ ಗಣಪತಿಯನ್ನು ಕಂತೇನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ವಿದ್ಯಾಧರ್, ಸಮಿಉಲ್ಲಾ, ಮುಖಂಡರಾದ ಸಯ್ಯದ್ ಸಿಕಂದರ್, ದರ್ಶನ್, ಭಾಸ್ಕರ್ ಹರೀಶ್, ಬಾಲಾಜಿ ಗಾಡ್ಗೆ, ಚೇತನ್ ಜೈನ್, ಸಿಂಧು ಅರುಣ್, ಸಿದ್ದೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿರಣ್‌ಕುಮಾರ್, ಕಮಿಟಿ ಅಧ್ಯಕ್ಷ ವೆಂಕಟೇಶ್,ಉಪಾಧ್ಯಕ್ಷ ನಿಖಿಲ್ ಚೋಪ್ರಾ, ಮೋಹಿತ್, ಲಿಖಿತ್, ವಿಕಾಸ್ ಸುರನ, ಹರ್ಷ,ಅಮೃತ್ ಇತರರಿದ್ದರು.