ಅದ್ದೂರಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ Anjaneyaswamy Brahmarathotsava 
ರಾಜ್ಯ

ಅದ್ದೂರಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ Anjaneyaswamy Brahmarathotsava

ಮುಳಬಾಗಿಲು: ನಗರದ ಪುರಾಣ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.Anjaneyaswamy Brahmarathotsava
ಶ್ರೀ ಸೀತಾ, ರಾಮಲಕ್ಷ$್ಮಣ ದೇವರ ಮೂರ್ತಿಯನ್ನು ಶಾಸಕ ಸಮೃದ್ಧಿ ವಿ.ಮಂಜುನಾಥ್​, ಸೇವಾಕರ್ತರು ಹೊತ್ತು ರಥದಲ್ಲಿ ಪ್ರತಿಷ್ಠಾಪನೆ ಮಾಡಿದರು.
ದೇವಾಲಯದ ಪ್ರಧಾನ ಅರ್ಚಕ ಎಚ್​.ಎ.ರಾಮಕೃಷ್ಣಮ್ಮಾಚಾರ್​ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್​ ವಿ.ಗೀತಾ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್​.ಆರ್​.ಸುವಾಸ್​ ಶೆಟ್ಟಿ ಇತರರು ಪಾಲ್ಗೊಂಡಿದ್ದರು.
ಆಂಜನೇಯಸ್ವಾಮಿ ದೇವಾಲಯ ಮುಂಭಾಗದ ವೃತ್ತದಿಂದ ಕುರುಪೇಟೆ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿ ಮುಂಭಾಗದವರೆಗೂ ರಥ ಮೆರವಣಿಗೆ ಮಾಡಲಾಯಿತು. ದಾರಿಯ ಎರಡು ಬದಿಗಳಲ್ಲೂ ಸೇವಕರ್ತರು ಪಾನಕ, ಕೋಸಂಬರಿ, ಮಜ್ಜಿಗೆ, ಪ್ರಸಾದ ವಿತರಣೆ ಮಾಡಿದರು.