High Court 
ರಾಜ್ಯ

ಶಿಕ್ಷಕರ(ಜಿಪಿಟಿ) ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ ತಡೆಯಾಜ್ಞೆ

ಶಿವಾನಂದ ಹಿರೇಮಠ

ಗದಗ
ಪಧವೀದರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ ದ್ವಿಸದಸ್ಯ ಪೀಠ ಗುರುವಾರ ತಡೆ ನೀಡಿದೆ. ಮುಂದಿನ ವಿಚಾರಣೆ ವರೆಗೂ ನೇಮಕಾತಿ ಪ್ರಕ್ರಿತೆ ತಡೆ ನೀಡಿದ ಹೈಕೋರ್ಟ ಅಜಿರ್ದಾರರಿಗೆ ಮತ್ತು ಪ್ರತಿವಾದಿಗಳಿಗೆ ದಾಖಲೆ ಸಲ್ಲಿಸಲು ತಿಳಿಸಿದೆ. ಸುಪ್ರೀಂಕೊಟಿರ್ ಮುಖಾಂತರ ಮೀಸಲಿಟ್ಟಿದ್ದ 500 ಹುದ್ದೆಗಳನ್ನು ಭರ್ತಿ ಮಾಡದಂತೆ ಗುರುವಾರ ಆದೇಶಿಸಿದೆ.
ಶಿಕ್ಷಕರ ನೇಮಕಾತಿಯಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿ ನೇಮಕದಲ್ಲಿ ತಂದೆ ಅಥವಾ ಗಂಡನ ಅದಾಯ ಪ್ರಮಾಣ ಪತ್ರದಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ಪ್ರಕರಣ ಇದಾಗಿದ್ದು, ಕಳೆದ 5 ವರ್ಷಗಳಿಂದ ವಿವಿಧ ಹಂತದಲ್ಲಿ ವಿಚಾರಣೆ ನಡೆದು ಇತ್ತೀಚೆಗೆ ಬೆಂಗಳೂರು ಕೆಎಟಿ ಆದೇಶ ನೀಡಿತ್ತು. ಸರ್ಕಾರವು ನೇಮಕಾತಿ ಸುತ್ತೊಲೆಯಲ್ಲಿ ಸ್ಪಷ್ಟವಾಗಿ ನಮೂದಿಸದೇ ತಪ್ಪೆಸಗಿದೆ. ಹಾಗಾಗಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪಾಲಕರ ಆದಾಯ ಪ್ರಮಾಣ ಪತ್ರ ಸಲ್ಲಿಸಿದವರನ್ನು ಪರಿಗಣಿಸಬೇಕು ಹಾಗೂ ಪತಿಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದವರಿಗೆ ನೇಮಕಾತಿಯಲ್ಲಿ ಅನ್ಯಾಯ ಆಗಬಾರದು ಎಂದು ತನ್ನ ಉಲ್ಲೇಖದಲ್ಲಿ ತಿಳಿಸಿತ್ತು. ಇದಾದ ನಂತರ ಶಿಕ್ಷಣ ಇಲಾಖೆ 2022ರ ಸುತ್ತೋಲೆಯಲ್ಲಿ ಬಾಕಿಯಿದ್ದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ಮಧ್ಯೆ ಪತಿಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಹೈಕೋರ್ಟ ಮೆಟ್ಟಿಲೇರಿದ್ದರು. ಗುರುವಾರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ ತಡೆ ನೀಡಿ ವಿಚಾರಣೆ ಮುಂದೂಡಿತು.