ಜಿ.ಪಿ.ಒ ಚಂದ್ರು  
ರಾಜ್ಯ

ಜಿಪಿಒ ಚಂದ್ರು - 50 ಅಭಿನಂದನಾ ಸಮಾರಂಭ

ಪ್ರಮುಖ ಮುಖ್ಯಾಂಶಗಳು

  • * ನಯನ ಸಭಾಂಗಣದಲ್ಲಿ ಶುಕ್ರವಾರ (ಜು.10) ಸಂಜೆ 4.30ಕ್ಕೆ ಕಾರ್ಯಕ್ರಮ ಆಯೋಜನೆ
ಬೆಂಗಳೂರು: ರಂಗ ಗೆಳೆಯರು, ಬೆಂಗಳೂರು ವತಿಯಿಂದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶುಕ್ರವಾರ (ಜು.10) ಸಂಜೆ 4.30ಕ್ಕೆ ರಂಗನಟ, ಸಾಂಸ್ಕೃತಿಕ ಸಂಘಟಕ, ಅಂಚೆ ಅಣ್ಣ ‘ಜಿ.ಪಿ.ಒ ಚಂದ್ರು -50’ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಸಂಜೆ 6.30ಕ್ಕೆ ದಾವಣೆಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹಾಗೂ ಅಂಚೆ ಸೇವೆಗಳು ಕರ್ನಾಟಕ ಅಂಚೆ ವಲಯದ ನಿರ್ದೇಶಕ ಸಂದೇಶ್ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಸದಸ್ಯ ಎ.ಎಸ್. ಚಂದ್ರಶೇಖರ್, ಚಿಕ್ಕತಾಯಮ್ಮ ಶ್ರೀ ಸಣ್ಣೇಗೌಡ, ಕರ್ನಾಟಕ ಸಂಘ ಮಂಡ್ಯ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮೊದಲಾದವರು ಭಾಗವಹಿಸಲಿದ್ದಾರೆ.
ಇದಕ್ಕೂ ಮೊದಲು ವೇದಿಕೆಯಲ್ಲಿ ರಂಗಗೀತೆಗಳ ಗಾಯನ, ರಂಗದೃಶ್ಯಾವಳಿ, ಜಾನಪದ ಗೀತೆಗಳ ಗಾಯನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.