ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ದಕ್ಷಿಣ ವಲಯದ ಕುಲಪತಿಗಳ ಸಮ್ಮೇಳನವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಉದ್ಘಾಟಿಸಿದರು.  
ರಾಜ್ಯ

ವಿಕಸಿತ ಭಾರತಕ್ಕೆ ಯುವಕರನ್ನು ಸಜ್ಜುಗೊಳಿಸಲು ರಾಜ್ಯಪಾಲರ ಕರೆ; ಕುಲಪತಿಗಳ ಸಮ್ಮೇಳನಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ವಿಕಸಿತ ಭಾರತಕ್ಕೆ ಯುವಕರನ್ನು ಸಜ್ಜುಗೊಳಿಸಲ ಕರೆ
  • ಕುಲಪತಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಿವಿಮಾತು
  • ದಕ್ಷಿಣ ಭಾರತ ಕುಲಪತಿಗಳ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರು:ವಿಶ್ವವಿದ್ಯಾಲಯಗಳುಉದ್ಯಮಶೀಲತೆಯ ಕೇಂದ್ರಗಳಾದಾಗಮಾತ್ರ ಭಾರತವು ಜ್ಞಾನಾಧಾರಿತಆರ್ಥಿಕತೆಯಿಂದ ನಾವೀನ್ಯತೆಆಧಾರಿತವಾಗಿ ಅಭಿವೃದ್ಧಿ ಹೊಂದಲಿದೆ.ವಿಕಸಿತ ಭಾರತಕ್ಕೆಯುವಜನತೆಯನ್ನು ಸಜ್ಜುಗೊಳಿಸುವಜವಾಬ್ದಾರಿ ವಿಶ್ವವಿದ್ಯಾಲಯಗಳಮೇಲಿದೆ ಎಂದು ರಾಜ್ಯಪಾಲ ಥಾವರಚಂದ್ಗೆಹಲೋತ್ ಹೇಳಿದರು.

ಎಂ.ಎಸ್.ರಾಮಯ್ಯಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯವತಿಯಿಂದ ಆಯೋಜಿಸಿದ್ದ ಭಾರತೀಯವಿಶ್ವವಿದ್ಯಾಲಯಗಳ ಸಂಘದ (ಎಐಯು)ದಕ್ಷಿಣ ವಲಯದಕುಲಪತಿಗಳ ಸಮ್ಮೇಳನವನ್ನುಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ,ಆರೋಗ್ಯ,ಶಿಕ್ಷಣ,ಪರಿಸರ ಮತ್ತುಡಿಜಿಟಲ್ ಸೇರ್ಪಡೆಯಂತಹ ಸವಾಲುಗಳಿಗೆಪರಿಹಾರಗಳನ್ನು ನೀಡುವ ನವೋದ್ಯಮಗಳನ್ನುವಿಶ್ವವಿದ್ಯಾಲಯಗಳು ಪ್ರೋತ್ಸಾಹಿಸಬೇಕು.ವಿದ್ಯಾರ್ಥಿಗಳಲ್ಲಿಉದ್ಯಮಶೀಲತಾ ಚಿಂತನೆಯನ್ನುಬೆಳೆಸಲು-ಶಿಕ್ಷಣ,ತಾಂತ್ರಿಕ-ರಾಷ್ಟ್ರೀಯತೆಯನ್ನುಉತ್ತೇಜಿಸಲು ಇನ್ಕ್ಯುಬೇಷನ್ಮತ್ತು ನಾವೀನ್ಯತೆ ಕೇಂದ್ರಗಳಸ್ಥಾಪನೆ, ನವೋದ್ಯಮಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ-ಉದ್ಯಮಸಹಯೋಗ ವಿಷಯಗಳ ಬಗ್ಗೆಯೂ ಚರ್ಚಿಸಬೇಕು.ಪ್ರಕೃತಿ ಮತ್ತುಸಂಸ್ಕೃತಿಯನ್ನು ಎರಡನ್ನೂರಕ್ಷಿಸುವ ಹೊಣೆಗಾರಿಕೆ ಯುವಕರಮೇಲಿದೆ.ಸ್ಟಾರ್ಟ್‌ಅಪ್ಇಂಡಿಯಾ, ಆತ್ಮನಿರ್ಭರಭಾರತ್, ಮೇಕ್ಇನ್ ಇಂಡಿಯಾದಂತಹ ರಾಷ್ಟ್ರೀಯಅಭಿಯಾನಗಳು ದೇಶದ ಭವಿಷ್ಯಕ್ಕಾಗಿಪದವಿ ಪಡೆದ ಯುವಕರನ್ನು ಮತ್ತುಉದ್ಯೋಗ ಸೃಷ್ಟಿಕರ್ತರನ್ನುಸೃಷ್ಟಿಸುತ್ತಿವೆ. ಈ ನಿಟ್ಟಿನಲ್ಲಿಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಉದ್ಯಮಶೀಲತೆ ಎಂಬ ಚಿಂತನೆಯ ವಿಷಯನಿರ್ಣಾಯಕವಾಗಿದೆ ಎಂದು ರಾಜ್ಯಪಾಲರುವಿವರಿಸಿದರು.

ಕಾರ್ಯಕ್ರಮದಲ್ಲಿಎಂ.ಎಸ್.ರಾಮಯ್ಯ ಅನ್ವಯಿಕವಿಜ್ಞಾನ ವಿವಿ ಕುಲಾಧಿಪತಿ ಡಾ.ಎಂ.ಆರ್.ಜಯರಾಮ್,ಎಐಯು ಅಧ್ಯಕ್ಷಪ್ರೊ.ವಿನಯ್ಕುಮಾರ್ ಪಾಠಕ್,ಪ್ರಧಾನ ಕಾರ್ಯದರ್ಶಿಡಾ. ಪಂಕಜಾಮಿತ್ತಲ್, ಕುಲಪತಿಕುಲದೀಪ್ ಕುಮಾರ್ ರೈನಾ,ದಕ್ಷಿಣ ಭಾರತದವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಕುಲಪತಿಗಳು ಉಪಸ್ಥಿತರಿದ್ದರು.

ರಾಮಯ್ಯಸಂಸ್ಥೆಯ ಕಾರ್ಯಕ್ಕೆ ಪ್ರಶಂಸೆ

1925ರಲ್ಲಿ ಸ್ಥಾಪನೆಯಾದಭಾರತೀಯ ವಿಶ್ವವಿದ್ಯಾಲಯಗಳಸಂಘವು ದೇಶದ ಉನ್ನತ ಶಿಕ್ಷಣವ್ಯವಸ್ಥೆಯ ಪ್ರಮುಖ ಸಂಸ್ಥೆಯಾಗಿದೆ.ವಿಶ್ವವಿದ್ಯಾಲಯಗಳಲ್ಲಿಸಮನ್ವಯ, ಗುಣಮಟ್ಟವೃದ್ಧಿ ಮತ್ತು ರಾಷ್ಟ್ರೀಯಏಕತೆಯನ್ನು ಬಲಪಡಿಸುವಲ್ಲಿಪ್ರಮುಖ ಪಾತ್ರ ವಹಿಸಿದೆ.ಎಂ.ಎಸ್.ರಾಮಯ್ಯಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯವುತನ್ನ ದೂರದೃಷ್ಟಿಯ ಶೈಕ್ಷಣಿಕವಾತಾವರಣ, ನಿರಂತರಸಂಶೋಧನಾ ಚಟುವಟಿಕೆಗಳಿಂದವಿದ್ಯಾರ್ಥಿಗಳಿಗೆ ಬೌದ್ಧಿಕವಾಗಿಮತ್ತು ವೈಯಕ್ತಿಕವಾಗಿ ಬೆಳೆಯಲುಅವಕಾಶಗಳನ್ನು ಒದಗಿಸುತ್ತಿದೆಎಂದು ರಾಜ್ಯಪಾಲರು ಪ್ರಶಂಸೆವ್ಯಕ್ತಪಡಿಸಿದರು.

ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಸವಾಲುಗಳು ಕೂಡ ಹೆಚ್ಚಾಗಿವೆ. ಅಂತಹ ಸವಾಲುಗಳನ್ನು ಎದುರಿಸಲು ವಿಶ್ವವಿದ್ಯಾಲಯಗಳು ಯುವಕರನ್ನು ಸಜ್ಜುಗೊಳಿಸಬೇಕು. ಕೇವಲ ವಿಜ್ಞಾನ ಪದವಿಗಳನ್ನು ನೀಡಿದರೆ ಸಾಲದು. ವೈಜ್ಞಾನಿಕ ಚಿಂತನೆಯೊಂದಿಗೆ ದೇಶದ ಅಭಿವೃದ್ಧಿಯಲ್ಲಿ ಬದ್ಧತೆ ರೂಢಿಸಿಕೊಳ್ಳುವ ಜವಾಬ್ದಾರಿಯುತ ಯುವ ಸಮುದಾಯವನ್ನು ಸೃಷ್ಟಿಸಬೇಕು.