ಶಿಥಿಲಗೊಂಡ ಸರ್ಕಾರಿ ಕಚೇರಿ ಕಟ್ಟಡಗಳು
- ಚಿಕ್ಕೋಡಿ ಪಟ್ಟಣದಲ್ಲಿವೇ ಶಿಥಿಲಗೊಂಡ ಕಟ್ಟಡಗಳು
- ಮಳೆಗಾಲದಲ್ಲಿ ಸೂರುವ ಸೂರು
- ಹಳೆದ್ದಾಗಿವೇ ಸರ್ಕಾರಿ ಕಚೇರಿ ಕಟ್ಟಡಗಳು
ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಕಚೇರಿಗಳು!
| ತಗಡಿನ ಶೀಟ್ ಆಸರೆಯಲ್ಲಿ ಕಾರ್ಯಾಲಯಗಳು | ನೌಕರರಿಗೆ, ಜನರಿಗೆ ಸುರಕ್ಷತೆ ಬೇಕಿದೆ
ಶೈಕ್ಷಣಿಕ ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಪಟ್ಟಣದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ. ಕಟ್ಟಡಗಳಲ್ಲಿ ಕೆಲವು ಶಿಥಿಲಗೊಂಡಿದ್ದರೆ, ಇನ್ನು ಕೆಲವು ಸ್ವಂತ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಳೆಗಾಲ ಆರಂಭದಿಂದ ಶಿಥಿಲ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಪಟ್ಟಣದಲ್ಲಿ ಪ್ರಸ್ತುತ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಕಚೇರಿ ಸೇರಿ ವಿವಿಧ ಇಲಾಖೆ 40ಕ್ಕೂ ಅಧಿಕ ಇಲಾಖೆಗಳು ಸ್ವಂತ ಕಟ್ಟಡ ಒಳಗೊಂಡಿವೆ. 12 ಇಲಾಖೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿಥಿಲ ಕಟ್ಟಡ ಹೊಂದಿರುವ ಇಲಾಖೆಗಳು ಹೊಸ ಕಟ್ಟಡದ ನಿರೀಕ್ಷೆಯಲ್ಲಿವೆ.
ತಾಲೂಕು ಆಡಳಿತ ಸೌಧ ಕಟ್ಟಡ, ಕಟ್ಟಡಗಳು ಹಳೆಯದಾಗಿವೆ. ಪ್ರಮುಖವಾಗಿ ತಾಪಂ ಕಾರ್ಯಾಲಯ, ಕೃಷಿ ಸಹಾಯಕ ನಿರ್ದೇಶಕರ ಕಚೇರಿ, ಪಂಚಾಯತ್ ರಾಜ್ಯ ಇಲಾಖೆ ಕಚೇರಿ, ಅಪರ ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಡಯಟ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಟಿಎಚ್‌ಒ ಕಚೇರಿಗಳು ಶಿಥಿಲಗೊಂಡಿದ್ದು ಹೊಸ ಕಟ್ಟಡಗಳು ಅನಿವಾರ್ಯವಲ್ಲ.
ಹೊಸ ಕಟ್ಟಡ ನಿರ್ಮಾಣವಾದರೂ ಹಳೇ ಕಟ್ಟಡದಲ್ಲಿಯೇ ಕಾರ್ಯ:
ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಅಪರ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಕಚೇರಿ, ತಾಲೂಕು ಭೂಮಾಪನ ಇಲಾಖೆ ಕಚೇರಿಗಳ ಕಾಮಗಾರಿ ಕಳೆದ ೬ ತಿಂಗಳ ಹಿಂದೆಯೇ ಇದೆ. ಆದರೆ, ಉದ್ಘಾಟನೆಯ ದಿನಾಂಕ ನಿಗದಿಯಾಗದಂತೆ ಸಂಬಧಪಟ್ಟ ಕಚೇರಿಗಳು ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಮಾಡಲ್ಪಟ್ಟಿದೆ. ಮಳೆಗಾಲ ಆರಂಭವಾಗಿದೆಆದ ಹೊಸ ಕಟ್ಟಡಗಳಿಗೆ ಕಚೇರಿಗಳನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಮಹತ್ವದ ದಾಖಲೆ ಪತ್ರಗಳು, ಗಣಕಯಂತ್ರ, ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಣೆ ದೃಷ್ಟಿಯಿಂದ ಮಳೆಗಾಲದಲ್ಲಿ ಕಚೇರಿಗಳು ದುರಸ್ತಿ ಕಾರ್ಯ. ಇತರ ಕೃಷಿ ಇಲಾಖೆ ಕಚೇರಿಗೆ ಬಿತ್ತನೆ ಬೀಜ, ಕೃಷಿ ಸಲಕರಣೆ ಪಡೆಯಲು ದಿನಂಪ್ರತಿ ನೂರಾರು ರೈತರು ಭೇಟಿ. ಅದರಂತೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಕಚೇರಿಗಳ ಸುಭದ್ರತೆ ಮುಖ್ಯ. ಆದ್ದರಿಂದ ಶಿಥಿಲ ಕಚೇರಿಗಳ ದುರಸ್ತಿಗೆ ಆಯಾ ಇಲಾಖೆಗಳಿಗೆ ತುರ್ತು ಕ್ರಮವಹಿಸುವುದು ಜನರ ಆಗ್ರಹವಾಗಿದೆ.