ಗ್ರಾಮೀಣ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಆರಂಭಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಎಐಡಿಎಸ್​ಒ ಸಂಘಟನೆ ನೆಲಮಂಗಲದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಎಐಡಿಎಸ್​ಒ ಖಜಾಂಚಿ ಸುಭಾಷ್​, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜ್ಞಾನಮೂರ್ತಿ, ಎಚ್​.ಪಿ.ಶಿವಪ್ರಕಾಶ್​, ವಿನಯ್​ ಸಾರಥಿ, ಐಶ್ವರ್ಯ, ನಿರ್ಮಲಾ, ಕಲಾವತಿ, ಮಾಚೋನಾಯಕನಹಳ್ಳಿ ನಾಗರಾಜು, ಹನುಮಂತರಾಯಪ್ಪ, ರಾಜಮ್​, ಗೋವಿಂದರಾಜು, ವಜ್ರಕಟ್ಟೇಪಾಳ್ಯ ರಘು ಇದ್ದರು. 
ರಾಜ್ಯ

ಸರ್ಕಾರಿ ಶಾಲೆಗಳ ವಿಲೀನ ಕ್ರಮ ಸಲ್ಲ / NELAMANGAL

ನೆಲಮಂಗಲ : ಗ್ರಾಮೀಣ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಆರಂಭಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಐಡಿಎಸ್​ಒ ಸಂಘಟನೆ ಪ್ರತಿಭಟನೆ ನಡೆಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ರಾಜ್ಯ ಎಐಡಿಎಸ್​ಒ ಕಾರ್ಯದರ್ಶಿ ಮಂಡಳಿಯ ಸದಸ್ಯ ಕಲ್ಯಾಣ್​ ಕುಮಾರ್​ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ಶಾಲೆ ಉಳಿಸುವ ಜನಾಂದೋಲನ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು ರಚನೆಯಾಗಿವೆ. ಹೊಸ ಸುತ್ತೋಲೆ ಪ್ರಕಾರ ಬಸವನಹಳ್ಳಿ ಮತ್ತು ಬರದಿಮಂಡಿಗೆರೆಯಲ್ಲಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ನಿಮಾರ್ಣ ಮಾಡಿ, ಸುತ್ತಮುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚುವ ಸಂಚು ರೂಪಿಸಲಾಗಿದೆ. ಬಸವನಹಳ್ಳಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಪಕ್ಕದಲ್ಲೇ ರೈಲ್ವೆ ಹಳಿಯಿದ್ದು, ಸಣ್ಣ&ಸಣ್ಣ ಮಕ್ಕಳು ಪ್ರಾಣದ ಹಂಗು ತೊರೆದು ಹಳಿ ದಾಟಿ ಬರಬೇಕಾದ ಅಪಾಯವಿದೆ ಎಂದರು.
ಬರದಿಮಂಡಿಗೆರೆಗೆ ವಿಲೀನವಾಗುತ್ತಿರುವ ಶಾಲೆಗಳು ತೀರಾ ಒಳಗಿನ ಹಳ್ಳಿಗಳಾಗಿದ್ದು, ಅಲ್ಲಿಗೆ ಯಾವುದೇ ಬಸ್​ ಸೌಲಭ್ಯವಿಲ್ಲ. ಜನ ತಮ್ಮ ಕೂಲಿ- ಕೆಲಸ ಬಿಟ್ಟು ತಮ್ಮ ಗ್ರಾಮದ ಶಾಲೆಗಳನ್ನು ಉಳಿಸಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಸರ್ಕಾರ ಕೊಡಬೇಕಾದ ಸೌಕರ್ಯಗಳನ್ನು ನಮ್ಮ ಹಳ್ಳಿಯ ಶಾಲೆಗಳಿಗೆ ಕೊಡಬೇಕು. ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಬಿಇಒ ನಮಗೆ ಲಿಖಿತವಾಗಿ ಭರವಸೆ ಕೊಡಬೇಕು ಎಂದು ಆಗ್ರಹಿಸಿದರು.
ನಾಗರಾಜು, ಕೌಡಿಪಾಳ್ಯದ ಭೀಮಣ್ಣ, ರೇಣುಕಾ, ಶಿವಮ್ಮ, ಲಕ್ಷಿ$್ಮ, ಮೈಲನಹಳ್ಳಿ ನಟರಾಜು, ಕಾಚನಹಳ್ಳಿ ಗೀತಾ, ರಮೇಶ್​, ಉಮೇಶ್​, ಅಣ್ಣಯ್ಯಸ್ವಾಮಿ, ಲೋಹಿತ್​ ನಗರದ ಕಲಾ, ಪದ್ಮ, ವಿಶ್ವೇಶ್ವರಪುರದ ಹೇಮಂತ, ಕಮಲಮ್ಮ, ಬೂದಿಹಾಲ್​ನ ಮುನಿರಾಜು, ಉಪೇಂದ್ರ, ಬೊಮ್ಮನಹಳ್ಳಿಯ ಚನ್ನಕೇಶವ, ವೆಂಕಟೇಶ್​, ಜಯಣ್ಣ ಇದ್ದರು.

ಪ್ರಸ್ತುತ ತಾಲೂಕಿನಲ್ಲಿ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚಿಲ್ಲ, ಮುಚ್ಚುವುದೂ ಇಲ್ಲ. ಇಬ್ಬರು ಮಕ್ಕಳಿರುವ ಶಾಲೆಯನ್ನೂ ನಾವು ನಡೆಸುತ್ತಿದ್ದೇವೆ. ಯಾವುದೇ ಶಿಕ್ಷಕರನ್ನು ಕೆಪಿಎಸ್​ ಮ್ಯಾಗ್ನೆಟ್​ ಶಾಲೆಗೆ ಬಲವಂತವಾಗಿ ವರ್ಗಾವಣೆ ಮಾಡುವುದಿಲ್ಲ.

— > ಕೆ.ಸಿ.ರಮೇಶ್​ ಬಿಇಒ