ಹೊಸಕೋಟೆ ತಾಲೂಕು ನಂದಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ರಾಜಶೇಖರ್, ಬಮುಲ್ ಒಕ್ಕೂಟದ ನಿರ್ದೇಶಕ ಎಲ್ಎನ್ಟಿ ಮಂಜುನಾಥ್ ಇದ್ದರು.
ನಂದಗುಡಿ : ಗ್ರಾಮೀಣ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಾಲಾ ಮಕ್ಕಳಿಗೆ ಸರ್ಕಾರ ಇಲಾಖೆ ಮೂಲಕ ವಿವಿಧ ಸೌಲಭ್ಯ ನೀಡುತ್ತಿರುವುದರ ಜತೆಗೆ ಕಾಪೋರ್ರೇಟ್ ಸಂಸ್ಥೆ ಹಾಗೂ ದಾನಿಗಳು ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ನಂದಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಐ ಪಥ್ ಮತ್ತು ಯುನೈಟೆಡ್ ವೇ ಕಂಪನಿಯ ಸಿಎಸ್ಆರ್ ಅನುದಾನದಡಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 4 ಕೊಠಡಿ, ಬೆಂಗಳೂರಿನ ಎಟಿ ಆ್ಯಂಡ್ ಟಿ ಕಂಪನಿಯಿಂದ 6 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಮತ್ತು ಮುಖ್ಯಮತ್ರಿಗಳ ಹಾಗೂ ಶಾಸಕರ ವಿಶೇಷ ಅನುದಾನದಡಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿಮಾರ್ಣ ಕಾಮಗಾರಿ ಹಾಗೂ 2 ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿರುವ ಸರ್ಕಾರಿ ಶಾಲಾ&ಕಾಲೇಜಿನ ಅಭಿವೃದ್ಧಿಗೆ ಕಾಪೋರ್ರೇಟ್ ಕಂಪನಿಗಳ ಸಿಎಸ್ಆರ್ ಅನುದಾನದಡಿ ದಾನಿಗಳ ನೆರವಿನಿಂದ ಹಾಗೂ ವೈಯುಕ್ತಿಕ ಹಣದಲ್ಲಿ ಶಾಲಾ ಕೊಠಡಿ, ಪೀಠೋಪಕರಣ, ಕಂಪ್ಯೂಟರ್, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಸಂಘ&ಸಂಸ್ಥೆಗಳು, ದಾನಿಗಳು ಸರ್ಕಾರಿ ಶಾಲೆಯ ಪ್ರಗತಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಇಒ ಪದ್ಮನಾಭ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ನಿಟ್ಟಿನಲ್ಲಿ ಕಾಪೋರ್ರೇಟ್ ಸಂಸ್ಥೆಗಳ ಸಿಎಸ್ಆರ್ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಯರ್ರೆಗೌಡ, ಉದ್ಯಮಿ ಕಲ್ಕೆರೆ ಎಂ.ಮಂದೀಪ್ಗೌಡ, ಎಸ್ಎಫ್ಸಿಎಸ್ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ನಿರ್ದೇಶಕರಾದ ಎಚ್.ಎನ್.ಧಮೇರ್ಶ್, ಚಂದ್ರಪ್ಪ, ಎಂ.ನಾಗೇಶ್, ಸಿ.ಎನ್.ದಿನೇಶ್, ಎನ್.ಶ್ರೀನಿವಾಸ್, ಎಸ್ಡಿಎಂಸಿ ಉಪಾಧ್ಯಕ್ಷ ಎನ್.ಗಂಗಾಧರ್, ಸದಸ್ಯ ಜಿ.ಮೂರ್ತಿ, ಭೂನ್ಯಾಯ ಮಂಡಳಿ ಸದಸ್ಯ ವೀರರಾಜು, ಯುನೈಟೆಡ್ವೇ ಕಂಪನಿಯ ನಾಗರಾಜ್, ಕೆ.ಮಂಜುನಾಥ್, ಮುಖಂಡರಾದ ಚೊಕ್ಕಸಂದ್ರ ದೇವರಾಜ್, ಲಕ್ಷಿ$್ಮನಾರಾಯಣ್, ಎನ್.ನಾಗೇಶ್, ನಟರಾಜ್, ಪಿಡಿಒ ಕೆಂಪಣ್ಣ, ಮುಖ್ಯಶಿಕ್ಷಕ ಡಿ.ಕೆ.ಕೃಷ್ಣಪ್ಪ ಇದ್ದರು.