Government schools provide perfect education. 
ರಾಜ್ಯ

ಸರ್ಕಾರಿ ಶಾಲೆಗಳಲ್ಲಿದೆ ಪರಿಪೂರ್ಣ ಶಿಕ್ಷಣ

\ಪಟ್ಟನಾಯಕನಹಳ್ಳಿ : ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಐಎಎಸ್​, ಐಪಿಎಸ್​, ಕೆಎಎಸ್​ ನಂತಹ ಹುದ್ದೆಗಳನ್ನು ಪಡೆದಿದ್ದಾರೆ. ಇದಕ್ಕೆ ಸರ್ಕಾರಿ ಶಾಲೆಗಳ ಶಿಕ್ಷಕರ ಬದ್ಧತೆ, ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಬೇಕೆಂಬ ಹಂಬಲವೇ ಕಾರಣ ಎಂದು ಶಿಕ್ಷಕ ಎಲ್​.ನರಸಿಂಹರಾಜು ಹೇಳಿದರು.
ಹೋಬಳಿಯ ಹನುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ಬೀಳ್ಕೊಡುಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳಿಗೆ ವಿಶಿಷ್ಟ ವೈಭವಯುತ ಬೀಳ್ಕೊಡುಗೆ ಹಾಗೂ ಗುರುವಂದನೆ ನೆರವೇರಿಸುತ್ತಿರುವುದು, ಗ್ರಾಮೀಣ ಪ್ರದೇಶದ ಜನರ ಪ್ರೀತಿ ವಿಶ್ವಾಸದ ಶ್ರೀಮಂತಿಕೆಯನ್ನು ಸಾಕ್ಷಿಕರಿಸುತ್ತದೆ ಎಂದರು.
ಮೇಲ್ಕುಂಟೆ ಗ್ರಾಪಂ ಅಧ್ಯಕ್ಷ ಲಕ್ಷ$್ಮಣ್​, ಸದಸ್ಯೆ ಜ್ಯೋತಿ ನರಸಿಂಹಮೂರ್ತಿ, ಮಾಜಿ ಸದಸ್ಯ ಸುರೇಶ್​, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡ ಜೋಡಿ ಬ್ರದರ್ಸ್​ ಕೃಷ್ಣಮೂರ್ತಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಎಚ್​.ಜಿ.ಮಂಜುನಾಥ್​, ರಮೇಶ್​, ಮುಖ್ಯ ಶಿಕ್ಷಕರ ರಾಮ ಹನುಮಯ್ಯ, ಶಿಕ್ಷಕ ಎಂ. ಆರ್​.ಶ್ರೀ ರಂಗ, ಗಿರೀಶ್​, ನಾರಾಯಣಪ್ಪ, ತಿಪ್ಪೇಸ್ವಾಮಿ ಇದ್ದರು.