- ರಾಜ್ಯಪಠ್ಯಕ್ರಮ ವ್ಯಾಸಂಗಕ್ಕಾಗಿ 6 ವರ್ಷ ತುಂಬದ ಮಕ್ಕಳು ಶಾಲೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ.
- ಸರ್ಕಾರವು ನಿಯಮ ಪರಿಷ್ಕರಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ನಿಟ್ಟುಸಿರುಬಿಡುವಂತಾಗಿದೆ.
- ಪ್ರಸ್ತುತ ಸಾಲಿಗೆ ಅನ್ವಯವಾಗುವಂತೆ ಎರಡು ತಿಂಗಳ ಸಮಯ ಸಡಿಲಿಕೆ ಮಾಡಲಾಗಿದೆ. ಹೀಗಾಗಿ, ಜು.31ರವರೆಗೆ ಜನಿಸಿರುವ ಮಕ್ಕಳು ಶಾಲೆಗೆ ಸೇರಬಹುದು
ಬೆಂಗಳೂರು: 2026-27ನೇ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶಾತಿಗೆ ಎರಡು ತಿಂಗಳ ಅವಧಿಯಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.
ರಾಜ್ಯಪಠ್ಯಕ್ರಮ ವ್ಯಾಸಂಗಕ್ಕಾಗಿ 6 ವರ್ಷ ತುಂಬದ ಮಕ್ಕಳು ಶಾಲೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನಗತ್ಯವಾಗಿ ಮಕ್ಕಳ ಒಂದು ವರ್ಷ ಸಮಯ ವ್ಯರ್ಥವಾಗಲಿದೆ. ಹೀಗಾಗಿ, ದಯಮಾಡಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಅದರಂತೆ, ಪ್ರಸ್ತುತ ಸಾಲಿಗೆ ಅನ್ವಯವಾಗುವಂತೆ ಎರಡು ತಿಂಗಳ ಸಮಯ ಸಡಿಲಿಕೆ ಮಾಡಲಾಗಿದೆ. ಹೀಗಾಗಿ, ಜು.31ರವರೆಗೆ ಜನಿಸಿರುವ ಮಕ್ಕಳು ಶಾಲೆಗೆ ಸೇರಬಹುದು.
ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಜೂ.1ಕ್ಕೆ 6 ವರ್ಷ ತುಂಬಿರಬೇಕು. ಇಲ್ಲವಾದಲ್ಲಿ ಜೂ.2ರಂದು ಜನಿಸಿದ್ದರೂ ಪ್ರವೇಶಕ್ಕೆ ಅವಕಾಶವಿಲ್ಲ. ಸರ್ಕಾರವು ನಿಯಮ ಪರಿಷ್ಕರಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ನಿಟ್ಟುಸಿರುಬಿಡುವಂತಾಗಿದೆ.