ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಅಥವಾ ಆರೋಗ್ಯ ಕೇಂದ್ರಗಳಿಗೆಸಾರ್ವಜನಿಕರಿಂದ ನಿವೇಶನ,ಕಟ್ಟಡ,ಹಣವನ್ನು ದಾನವಾಗಿಸ್ವೀಕರಿಸಿ ದಾನಿಗಳು ಸೂಚಿಸುವಹೆಸರನ್ನು ಆಸ್ಪತ್ರೆಗೆ ಇಡಲುಸರ್ಕಾರ ಆದೇಶ ಮಾಡಿದೆ.ಆಯುಷ್ ಇಲಾಖೆಯಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಗೆಸರ್ಕಾರ ಅನುಮತಿ ನೀಡಿದೆ.
ರಾಷ್ಟ್ರೀಯಆಯುಷ್ ಅಭಿಯಾನದಡಿಯಲ್ಲಿ 2018-19ನೇಸಾಲಿನಲ್ಲಿ ರೋಗಿಗಳಿಗೆ ಉತ್ತಮಗುಣಮಟ್ಟದ ಚಿಕಿತ್ಸೆ ನೀಡುವಉದ್ದೇಶದಿಂದ ಇಲಾಖೆಗೆ 15ಆಯುಷ್ ಆಸ್ಪತ್ರೆಗಳನ್ನುರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿಮೇಲ್ದರ್ಜೆಗೇರಿಸಲು ಕೇಂದ್ರಸರ್ಕಾರವು ಅನುಮೋದನೆ ನೀಡಿ ಅಗತ್ಯಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲುಪ್ರತಿ ಆಸ್ಪತ್ರೆಗೆ ಕಟ್ಟಡಉನ್ನತೀಕರಣ ಕಾಮಗಾರಿಗಳಿಗಾಗಿ56.25 ಲಕ್ಷರೂ. ನಿಗದಿಪಡಿಸಿತ್ತು.ಈ ಯೋಜನೆಯಡಿಗದಗ ಜಿಲ್ಲೆಯ ನರಗಂದುದಲ್ಲಿಸರ್ಕಾರಿ ಆಯುರ್ವೇದ ಆಸ್ಪತ್ರೆಕಟ್ಟಡ ನಿರ್ಮಾಣವಾಗಿದ್ದು,ಸದರಿ ಕಟ್ಟಡದನಿವೇಶನ ಪಡೆಯಲು ಅವಶ್ಯಕ ಅನುದಾನಸುಮಾರು 5 ಲಕ್ಷರೂ. ದಾನವಾಗಿನೀಡಿದ ಮಾಜಿ ಸಚಿವ ಸಿ.ಸಿ.ಪಾಟೀಲ್ತಮ್ಮ ಸಹೋದರ ದಿವಂಗತ ಶೇಖರಗೌಡಚಿನಪ್ಪಗೌಡ ಪಾಟೀಲ್, ಹೆಸರನ್ನುಇಡುವಂತೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿಆಯುಷ್ ಇಲಾಖೆ ಆಯುಕ್ತರು ಸರ್ಕಾರದಅನುಮತಿಗೆ ಪ್ರಸ್ತಾವನೆ ಸಲ್ಲಿಸಿದ್ದರು.ಪ್ರಸ್ತಾವನೆಮತ್ತು ಲಭ್ಯ ದಾಖಲೆಗಳನ್ನುಪರಿಶೀಲಿಸಿದ ಸರ್ಕಾರವು ಕೆಲವುಷರತ್ತುಗಳೊಂದಿಗೆ ಹೊಸ ಆದೇಶವನ್ನುಹೊರಡಿಸಿದೆ. ಸಾರ್ವಜನಿಕರಿಂದಆಸ್ಪತ್ರೆಗಳಿಗೆ ನಿವೇಶನ,ಕಟ್ಟಡ,ಉಪಕರಣ ಮತ್ತುಹಣವನ್ನು ದಾನ ರೂಪದಲ್ಲಿ ಸ್ವೀಕರಿಸಲುಹಾಗೂ ದಾನಿಗಳ ಅಥವಾ ದಾನಿಗಳುಸೂಚಿಸಿರುವ ಹೆಸರುಗಳನ್ನು ನಾಮಕರಣಮಾಡಲು ಅವಕಾಶ ನೀಡಲಾಗಿದೆ.