ವೇತನ ಬಟವಾಡೆ ಅಧಿಕಾರಿ 
ರಾಜ್ಯ

ಸರ್ಕಾರಿ ಪ್ರೌಢಶಾಲೆ ಉನ್ನತೀಕರಣ: ವೇತನ ಬಟವಾಡೆ ಅಧಿಕಾರಿಗಳ ನೇಮಕ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ವೇತನ ಸೆಳೆಯಲು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವೇತನ ಬಟವಾಡೆ ಅಧಿಕಾರಿಯಾಗಿ ನೇಮಿಸಲಾಗಿದೆ.
ಬೆಂಗಳೂರು: ಪ್ರೌಢ ಶಾಲೆಗಳನ್ನಾಗಿ ಉನ್ನತಿಕರಿಸಲಾಗಿರುವ 15 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾಗಿರಾದ ಹಿನ್ನೆಲೆಯಲ್ಲಿ ಅಲ್ಲಿನ ಶಿಕ್ಷಕರ ವೇತನ ಸೆಳೆಯಲು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವೇತನ ಬಟವಾಡೆ ಅಧಿಕಾರಿಯಾಗಿ ನೇಮಿಸಲಾಗಿದೆ.
ಉಡುಪಿಯ ಮೆಟ್ಟಿನಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಟ್ಟಿನಹೊಳೆ, ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಮಾದರಿ ಶಾಲೆ ಆರ್ ಕೆ ಹೆಗ್ಗಡೆನಗರ, ರಾಯಚೂರಿನ ಛತ್ತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀದರ್‌ನ ಕಮಲಾನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ,
ವಿಜಯಪುರದ ಬನಕಲಗಿ ಸರ್ಕಾರಿ ಮಾದರಿ ಶಾಲೆ, ಬೋರಾಗಿಯ ಸರ್ಕಾರಿ ಕೆಬಿಹೆಚ್ ಪಿಎಸ್, ಬೀರಲದಿನ್ನಿಯ ಸರ್ಕಾರಿ ಕೆಬಿಹೆಚ್ ಪಿಪಿಎಸ್ ಮತ್ತು ಯರ್ಝೆರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೊಮ್ಮನಗಿಯ ಸರ್ಕಾರಿ ಕೆಬಿ ಮಾದರಿ ಪ್ರಾಥಮಿಕ ಶಾಲೆ, ಹಾವೇರಿಯ ಬ್ಯಾಡಗಿಯ ಸರ್ಕಾರಿ ತಾಲೂಕು ಮಾದರಿ ಶಾಲೆ ಮತ್ತು ಗುಂಡಗಟ್ಟಿಯ ಜಿಹೆಚ್ ಪಿಎಸ್ ಕನ್ನಡ ಶಾಲೆ, ಬೆಳಗಾವಿಯ ಕೆ ಹೆಚ್ ಪಿ ಎಸ್ ನ ಅವರಡಿ, ಸುಲ್ತಾನಪುರದ ಕೆಹೆಚ್ ಪಿಎಸ್, ಬಾಗಲಕೋಟೆಯ ಬೊಮ್ಮನಗಿಯ ಸರ್ಕಾರಿ ಕೆಬಿ ಮಾದರಿ ಪ್ರಾಥಮಿಕ ಶಾಲೆಗೆ ಈ ವ್ಯವಸ್ಥೆ ಮಾಡಲಾಗಿದೆ.