ಕೊಳವಿ ಸರ್ಕಾರಿ ಪ್ರೌಢಶಾಲೆಗೆ ತಾಪಂ ಇಒ ಪರಶುರಾಮ ಸ್ತೆ ಭೇಟಿ ನೀಡಿ ಪರಿಶೀಲಿಸಿದರು. ಸಂಜೀವಕುಮಾರ ಜೋತಾವರ, ಅಶೋಕ ಮಲಬನ್ನವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಮದಾಪುರ
ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಾಪಂ ಇಒ ಪರಶುರಾಮ ಘಸ್ತೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ವಿವಿಧ ಸೌಲಭ್ಯ ಕೊರತೆಯಿಂದ ನಲಗುತ್ತಿರುವ ಕೊಳವಿ ಸರ್ಕಾರಿ ಪ್ರೌಢಶಾಲೆಯ ದುಸ್ಥಿತಿ ಕುರಿತು ಜೂ.20ರಂದು "ಸೌಲಭ್ಯ ವಂಚಿತ ಸರ್ಕಾರಿ ಪ್ರೌಢಶಾಲೆ' ಎಂಬ ಶೀರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತು ತಾಪಂ ಇಒ ಪರಶುರಾಮ ಘಸ್ತೆ ಭೇಟಿ ನೀಡಿ ಪರಿಶೀಲಿಸಿದರು. ಜು.1ರಿಂದ ಆರಂಭವಾಗುವ ವಿಬಿ &ಜಿ ರಾಮಜಿ ಯೋಜನೆಯಡಿ ಶಾಲೆಯಲ್ಲಿ ಕಾಂಪೌಂಡ್ ನಿರ್ಮಾಣ ಹಾಗೂ ಶೌಚಗೃಹಗಳ ದುರಸ್ತಿ ಜತೆಗೆ ಹೆಚ್ಚುವರಿ ಶೌಚಗೃಹಗಳ ನಿರ್ಮಾಣಕ್ಕೆ ಮುಂದಾಗಬೇಕೆಂದು ಸ್ಥಳದಲ್ಲಿದ್ದ ಪಿಡಿಒ ಸಂಜೀವಕುಮಾರ ಜೋತಾವರಗೆ ಸೂಚಿಸಿದರು. ಸಭಾಭವನ ನಿರ್ಮಾಣದ ಕುರಿತಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಅಕ್ಷರ ದಾಸೋಹ ಅಧಿಕಾರಿ ಅಶೋಕ ಮಲಬನ್ನವರ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮಾರುತಿ ಯಡ್ರಾವಿ, ಮುಖ್ಯಶಿಕ ಎಂ.ಬಿ.ಮುತ್ನಾಳ, ಶಿಕರು ಹಾಗೂ ಅಡುಗೆ ಸಿಬ್ಬಂದಿ ಇದ್ದರು.