ಬಂಗಾರಪೇಟೆ schoolತಾಲೂಕು ತೊಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗೇಟ್ಗೆ ಮಣ್ಣು ಹಾಕಿ ಬಂದ್ ಮಾಡಿರುವುದು.
ಬಂಗಾರಪೇಟೆ: ತಾಲೂಕಿನ ತೊಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಸ್ತೆಯನ್ನು ವ್ಯಕ್ತಿಯೊಬ್ಬರು school ಬಂದ್ ಮಾಡಿದ್ದ ದೂರಿನ ಮೇರೆಗೆ ಬಿಇಒ ಶಶಿಕಲಾ ಹಾಗೂ ಪಿಡಿಒ ವಾಣಿ ಸ್ಥಳ ಪರಿಶೀಲಿಸಿದರು.
ತೊಪ್ಪನಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 10 ಅಡಿ ಅಗಲ ಹಾಗೂ 50 ಅಡಿ ಉದ್ದದ ದಾರಿಯಲ್ಲೇ ಹಲವು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಹೋಗಿ ಬರುತ್ತಿದ್ದರು.
ಭಾನುವಾರ ಸಂಜೆ ಗ್ರಾಮದ ವ್ಯಕ್ತಿಯೊಬ್ಬರು ಜಾಗ ನನ್ನದು ಎಂದು ಹೇಳಿ ಶಾಲೆ ಮುಂಭಾಗದಲ್ಲೇ ಮಣ್ಣು ಸುರಿಸಿ ದಾರಿ ಬಂದ್ ಮಾಡಿದ್ದಾರೆ. ಈ ಬಗ್ಗೆ ಶಾಲೆ ಮುಖ್ಯಶಿಕ್ಷಕ ರವೀಂದ್ರನಾಥ, ಬಿಇಒ ಹಾಗೂ ಪಿಡಿಒ ಗಮನಕ್ಕೆ ತಂದಿದ್ದರು.
ಈ ರಸ್ತೆ ಬಿಟ್ಟರೆ ಶಾಲೆಗೆ ಹೋಗಿ ಬರಲು ಪರ್ಯಾಯ ಮಾರ್ಗ ಇಲ್ಲದ ಕಾರಣ ಪಿಡಿಒ ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಆಗಮಿಸಿ ರಸ್ತೆ ಬಂದ್ ಮಾಡಿದ ವ್ಯಕ್ತಿಯ ಮನವೊಲಿಕೆಗೆ ಯತ್ನಿಸಿದರಾದರೂ ಲ ಕಾಣದ ಕಾರಣ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಸದ್ಯ ಶಾಲೆಗಳಿಗೆ ರಜೆ ಇರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದಿಲ್ಲ. ರಜಾ ದಿನಗಳು ಮುಗಿಯುವ ಒಳಗಡೆ ಈ ವಿವಾದಿತ ರಸ್ತೆ ಸಮಸ್ಯೆ ನಿವಾರಣೆಗೊಂಡರೆ ಶಾಲೆಗೆ ಹೋಗಿ ಬರಲು ಬಹಳ ಅನುಕೂಲವಾಗಲಿದೆ.
ಕಳೆದ ವರ್ಷವೂ ಇದೇ ರಜಾ ದಿನಗಳಲ್ಲಿ ಶಾಲೆಗೆ ರಸ್ತೆ ಬಂದ್ ಮಾಡಲಾಗಿತ್ತು. ಭೂ ಮಾಲೀಕನನ್ನು ಸಮಾಧಾನಪಡಿಸಿ ರಸ್ತೆ ಸಮಸ್ಯೆ ಬಗೆಹರಿಸಲಾಗಿತ್ತು. ಹಲವು ವರ್ಷಗಳ ಹಿಂದೆಯೇ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿವಾದಿತ ರಸ್ತೆ ಜಾಗಕ್ಕೆ ಇ&ಖಾತೆಯನ್ನೂ ತೆರೆಯಲಾಗಿದೆ. ಆದರೂ ಪದೇ ಪದೆ ರಸ್ತೆ ಬಂದ್ ಮಾಡುತ್ತಿರುವುದರ ಹಿಂದಿನ ಮರ್ಮವೇನು ಎಂಬುದು ನಿಗೂಢವಾಗಿದೆ.