ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರ ಹೋರಾಟ ಭಾನುವಾರ 40ನೇ ದಿನಕ್ಕೆ ಕಾಲಿಟ್ಟಿತು. ಹಸನಸಾಬ ಪಿಂಜಾರ, ಯಮನಪ್ಪ ವಾಲಿಕಾರ, ಬಿ.ಎಸ್. ಕಳ್ಳಿಗುಡ್ಡ, ಹನಮಂತನ ನಂದಿಕೇಶ್ವರ ಇದ್ದರು.
- ಮುಂದುವರಿದ ಧರಣಿ ಸತ್ಯಾಗ್ರಹ
- ಪ್ರತಿಭಟನೆ ನಿರತದ ಆಕ್ರೋಶ
- ಕೆಂಗಲ್, ಖಜಗಲ್ಲ ಗ್ರಾಮಗಳ ಜನತೆ ಭಾಗಿ
ಹುನಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರು ನಡೆಸುತ್ತಿರುವ ಹೋರಾಟವು ಭಾನುವಾರ 40ನೇ ದಿನಕ್ಕೆ ಕಾಲಿಟ್ಟಿತು, ಕೆಂಗಲ್, ಖಜಗಲ್ಲ ಗ್ರಾಮದ ಸಂತ್ರಸ್ತರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನಮಗೌಡ ಪಾಟೀಲ ಮಾತನಾಡಿ, ಮುಳುಗಡೆ 10 ಗ್ರಾಮಗಳಿಗೂ ಪುನರ್ವಸತಿ ಕೇಂದ್ರಗಳು ಇದ್ದರೂ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಸದ್ಯ ಸರ್ಕಾರ ಒಂದು ಗುಂಟೆ ನಿವೇಶನ ನೀಡಿದೆ.
ಆದರೆ ಆ ಒಂದು ಗುಂಟೆ ಜಾಗೆಯಲ್ಲಿ ರೈತಾಪಿ ಕುಟುಂಬ ಬದುಕಲು ಸಾಧ್ಯವಿಲ್ಲ. ದನ-ಕರು, ಆಡು, ಕುರಿಗಳನ್ನು ಕಟ್ಟಿಕೊಂಡು ಸರ್ಕಾರ ಕೊಟ್ಟ ಜಾಗೆಯಲ್ಲಿ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಾಲ್ಕು ಗುಂಟೆ ನಿವೇಶನ ನೀಡಬೇಕು. ಅಲ್ಲಿಯ ವರೆಗೂ ಹೋರಾಟ ಮುಂದುವರಿಯಲಿದೆ ಎಂದು ಖಡಕ್ ಸಂದೇಶ ನೀಡಿದರು.
ಬಿ.ಬಿ. ಕೊಪ್ಪದ, ಯಮನಪ್ಪ ವಾಲಿಕಾರ, ಬಿ.ಎಸ್. ಕಳ್ಳಿಗುಡ್ಡ, ಹನಮಂತನ ನಂದಿಕೇಶ್ವರ, ಮಂಜುನಾಥ ಲಗಮ್ಮಣ್ಣವರ, ಬಸಪ್ಪ ಜುಮ್ಮಣ್ಣವರ, ಗಂಧಪ್ಪ ಜುಮಣ್ಣವರ, ಶೇಖಪ್ಪ ಕಾಳಗಿ, ಸಿದ್ದಪ್ಪ ಲಗಮ್ಮಣ್ಣವರ, ಯಮನಪ್ಪ ಕೊಪ್ಪದ, ಹನುಮಂತ ಮಂಕಣಿ, ಮುತ್ತಪ್ಪ ಮಾಗಿ, ರಾಮಣ್ಣ ಕೊಪ್ಪದ, ಶರಣಪ್ಪ ಲಗಮ್ಮಣ್ಣವರ ಇದ್ದರು.