Digital Arrest Bagalkote 
ರಾಜ್ಯ

ಡಿಜಿಟಲ್​ ಅರೆಸ್ಟ್​ಗೊಳಗಾದ ಸರ್ಕಾರಿ ನೌಕರ; 83 ಲಕ್ಷ 22ರೂ. ಪಂಗನಾಮ, ದೂರು ದಾಖಲು..Digital Arrest

ಪ್ರಮುಖ ಮುಖ್ಯಾಂಶಗಳು

  • ನಕಲಿ ಕೋರ್ಟ್, ಸಿಬಿಐ ಕಚೇರಿ ವಿಡಿಯೋ ಕಾಲ್ ನಲ್ಲಿ ವಿಚಾರಣೆ ಸೆಟಪ್ ಮಾಡಿ ಲಕ್ಷಾಂತರ ರೂ. ವಸೂಲಿ.
  • ಬರೋಬ್ಬರಿ 83 ಲಕ್ಷ 22 ಸಾವಿರ ರೂಪಾಯಿ ಕಳೆದುಕೊಂಡು ಪರಿತಪಿಸುತ್ತಿರುವ ವ್ಯಕ್ತಿ
  • ಜೀವಮಾನದ ದುಡಿಮೆಯನ್ನೇ ಕೊಳ್ಳೆ ಹೊಡೆದ ವಂಚಕರ ಜಾಲ..
ಬಾಗಲಕೋಟೆ: ನಿವೃತ್ತ ವೈದ್ಯರು, ಶಿಕ್ಷಕರು ಸೇರಿದಂತೆ  ವಿದ್ಯಾವಂತರೇ ಹೆಚ್ಚಾಗಿ ಡಿಜಿಟಲ್​ ಅರೆಸ್ಟ್​ಗೆ ಒಳಗಾಗುತ್ತಿದ್ದರು. ಆನ್​ಲೈನ್​ನಲ್ಲಿ ಯಾವುದೇ ರೀತಿ ವಿಚಾರಣೆಯನ್ನು ಪೊಲೀಸರು ಮಾಡೋಲ್ಲ, ವಾಟ್ಸಾಪ್​ ಸಂದೇಶ ಕಳಿಸಲ್ಲ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರು.  ಹೀಗಿದ್ದರೂ ಯಾಮಾರುವ ಜನರು ವಂಚಕರ ಖೆಡ್ಡಾಕ್ಕೆ ಬಿದ್ದು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಳ್ಳುತ್ತಿದ್ದಾರೆ. 
ಬಾಗಲಕೋಟೆಯ ಸರ್ಕಾರಿ ನೌಕರರೊಬ್ಬರು  ತಮ್ಮ ನಿವೃತ್ತ ಜೀವನಕ್ಕಾಗಿ ಉಳಿತಾಯ ಮಾಡಿದ್ದ  83 ಲಕ್ಷ 22 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇವರು ಇನ್ನೂ ಮೂರು ತಿಂಗಳಲ್ಲಿ ನಿವೃತ್ತಿ  ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. 

ಅಶ್ಲೀಲ ಮೆಸೇಜ್ ಕಳಿಸಲಾಗಿದೆ ಎಂದು ಲಾಕ್

ನಿಮ್ಮ ಹೆಸರಿನಲ್ಲಿ ಸಿಮ್ ಪಡೆದು,  ನಿಮ್ಮ​​​​ ನಂಬರ್​ಗಳಿಂದ ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್​  ಬಂದಿದೆ ಎಂದು ದೂರು ದಾಖಲಾಗಿದೆ. ಹೀಗಾಗಿ, ನೀವು ಡಿಜಿಟಲ್​ ಅರೆಸ್ಟ್​ಗೆ ಒಳಗಾಗಿದ್ದೀರಿ, ವಿಡಿಯೋ ಕಾಲ್​ ಮೂಲಕ ವಿಚಾರಣಗೆ ಹಾಜರಾಗಿ.  ನಿಮ್ಮ ಕೇಸ್ ಸಿಬಿಐಗೆ  ವರ್ಗಾವಣೆ ಆಗಿದೆ ಎಂದು  ಕರೆ ಮಾಡಿದ್ದರು ಎನ್ನುವುದಾಗಿ ಸರ್ಕಾರಿ  ನೌಕರ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ನಕಲಿ ಕೋರ್ಟ್, ಸಿಬಿಐ ಕಚೇರಿ ವಿಡಿಯೋ ಕಾಲ್ ನಲ್ಲಿ ವಿಚಾರಣೆ ಸೆಟಪ್ ಮಾಡಿ, ಫೆಬ್ರವರಿ 22 ರಿಂದ ಏಪ್ರಿಲ್ 13 ರ ವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.  ಇಷ್ಟಕ್ಕೇ ನಿಲ್ಲದೇ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಾಗ  ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಹಣ ಪಾವತಿ ಮಾಡಿದ್ದಾರೆ. ಜೊತೆಗೆ ನ್ಯಾಯಾಲಯದ ಜಾಮೀನು ಹೆಸರಿನಲ್ಲಿ 25 ಲಕ್ಷ ಹಣ ಪಾವತಿಸಿಕೊಂಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್​).