ಕರ್ಮಣಿ ಉತ್ಸವ 2026ನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಿ.ಪದ್ಮಾವತಿ, ರಾಗಿಣಿ ದ್ವಿವೇದಿ ಮತ್ತಿತರರಿದ್ದರು.  
ರಾಜ್ಯ

ಮಹಿಳೆಯರಿಗೆ ಶಕ್ತಿ ತುಂಬಲು ಸರ್ಕಾರ ಬದ್ಧ; ಡಿಕೆಶಿ ಭರವಸೆ, ಕರ್ಮಣಿ ಉತ್ಸವಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರಿಗೆ ಶಕ್ತಿ ತುಂಬಲು ಸರ್ಕಾರ ಬದ್ಧ
  • ಕರ್ಮಣಿ ಉತ್ಸವಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆಶಿ ಭರವಸೆ
  • ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಬಿಡುಗಡೆ

ಬೆಂಗಳೂರು:ಹೆಣ್ಣು ಕುಟುಂಬದಕಣ್ಣು ಎಂಬುದನ್ನು ಅರಿತಿರುವನಮ್ಮ ಸರ್ಕಾರ ಮಹಿಳೆಯರಿಗೆ ಶಕ್ತಿತುಂಬಲು ಹಲವು ಯೋಜನೆಗಳನ್ನುಜಾರಿಗೆ ತಂದಿದ್ದು,ಅವುಗಳನ್ನುಯಶಸ್ವಿಯಾಗಿ ಮುಂದುವರೆಸಲಿದ್ದೇವೆಎಂದು ಡಿಸಿಎಂ ಡಿ.ಕೆ.ಶಿವಕುಮಾರಹೇಳಿದರು.

ರಾಜಾಜಿನಗರದರಾಮಮಂದಿರದಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ನಿಗಮವುಆಯೋಜಿಸಿದ್ದ ಕರ್ಮಣಿ ಉತ್ಸವ-2026ಕ್ಕೆಚಾಲನೆ ನೀಡಿ ಮಾತನಾಡಿದರು.

ಮಹಿಳೆಯರಿಗೆಆರ್ಥಿಕವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿಶಕ್ತಿ ತುಂಬುವುದಕ್ಕಾಗಿ ದೇಶದಲ್ಲೇಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರಮಹಿಳೆಯರ ಖಾತೆಗೆ 2ಸಾವಿರ ರೂಪಾಯಿನೀಡುವ ಗೃಹಲಕ್ಷ್ಮಿ ಯೋಜನೆ,ಉಚಿತವಾಗಿಸರ್ಕಾರಿ ಬಸ್‌ನಲ್ಲಿ ಸಂಚಾರಮಾಡಲು ಶಕ್ತಿ ಯೋಜನೆ ಮತ್ತಿತರಕಾರ್ಯಕ್ರಮಗಳನ್ನು ರೂಪಿಸಿದೆ.ದೇವರು ವರ ಅಥವಾಶಾಪ ಕೊಡುವುದಿಲ್ಲ.ಬದಲಾಗಿ ಅವಕಾಶಕೊಡುತ್ತಾನೆ.ಅದನ್ನು ಬಳಸಿಕೊಂಡುಚಿಕ್ಕ ಕ್ಷೇತ್ರದಲ್ಲೂ ದೊಡ್ಡಕೆಲಸ ಮಾಡಬಹುದು. ಅದನ್ನುಪದ್ಮಾವತಿಯವರು ಮಾಡಿ ತೋರಿಸಿದ್ದಾರೆ. ನಾನು ರಾಮಮಂದಿರದಮೈದಾನದಲ್ಲಿ ಹರಿಕತೆ,ಭಗವದ್ಗೀತೆಗಳನ್ನುಕೇಳಿ ರಾಜಾಜಿನಗರದಲ್ಲೇ ಬೆಳೆದವನು.ನಿಮ್ಮೆಲ್ಲರಆಶೀರ್ವಾದದಿಂದ ಬೆಂಗಳೂರುಸಚಿವನಾಗಿ ಕೆಲಸ ಮಾಡುವ ಭಾಗ್ಯಬಂದಿದೆ. ಗ್ರೇಟರ್ಬೆಂಗಳೂರು ಮೂಲಕ 5ಪಾಲಿಕೆಗಳನ್ನುಮಾಡಿ ಬೆಂಗಳೂರಿನ ಅಭಿವೃದ್ಧಿಗೆಹಿಂದೆಂದಿಗಿಂತಲೂ ನಮ್ಮ ಸರ್ಕಾರಹೆಚ್ಚು ಒತ್ತು ನೀಡಿದೆ ಎಂದುಡಿಕೆಶಿ ಹೇಳಿದರು.

ಕಾರ್ಯಕ್ರಮದಲ್ಲಿಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ,ಮಹಿಳಾ ಮತ್ತುಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್,ವಿಧಾನ ಪರಿಷತ್ಸದಸ್ಯ ಪುಟ್ಟಣ್ಣ,ನಿಗಮದ ಅಧ್ಯಕ್ಷೆಜಿ.ಪದ್ಮಾವತಿ, ವ್ಯವಸ್ಥಾಪಕನಿರ್ದೇಶಕ ಮಹೇಶ್ ಬಾಬು,ಚಿತ್ರನಟಿ ರಾಗಿಣಿದ್ವಿವೇದಿ ಮತ್ತಿತರರು ಪಾಲ್ಗೊಂಡಿದ್ದರು.

ಗೃಹಲಕ್ಷ್ಮಿ ಡಿಜಿಟಲ್ ಆ್ಯಪ್ ಲೋಕಾರ್ಪಣೆ

ರಾಜ್ಯದ ಮೂಲೆ ಮೂಲೆಗಳಲ್ಲಿರುವ ಸೀಶಕ್ತಿ ಗುಂಪುಗಳು ಹಾಗೂ ಸೀಯರು ಉತ್ಪಾದಿಸುವ ಎಲ್ಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಇಲಾಖೆ ರೂಪಿಸಿರುವ ‘ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್’ನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದ್ಯ ಜಗತ್ತು ಡಿಜಿಟಲ್‌ಮಯವಾಗಿದ್ದು, ಎಲ್ಲ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮೀಣ ಮಹಿಳೆಯರು ತಯಾರಿಸುವ ವಸ್ತುಗಳು ಕೂಡಾ ಆನ್‌ಲೈನ್ ಮೂಲಕ ದೊರೆಯಬೇಕೆಂಬ ಕಾರಣಕ್ಕೆ ಗೃಹಲಕ್ಷ್ಮಿ ಆ್ಯಪ್ ರೂಪಿಸಲಾಗಿದೆ. ಇದರಿಂದ ಸೀಯರ ಸ್ವಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ನೀಡಿದ್ದು, ಆ ಪರಂಪರೆ ಇಂದಿಗೂ ಮುಂದುವರೆದಿದೆ ಎಂದರು.

ದುರ್ಬಲ ಮಹಿಳೆಯರಿಗೆ ಶಕ್ತಿ ತುಂಬಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ನಿರಂತರವಾಗಿ ಶ್ರಮಿಸುತ್ತಿದೆ. ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕರ್ಮಣಿ ಉತ್ಸವಕ್ಕೆ 8 ವರ್ಷಗಳ ನಂತರ ಚಾಲನೆ ದೊರೆತಿದೆ. ಇನ್ನೂ 3 ದಿನಗಳ ಕಾಲ ಉತ್ಸವ ನಡೆಯಲಿದೆ.