ಸರ್ಜಾಪುರದಲ್ಲಿ ಆಯೋಜಿಸಿದ್ಗದ ಮಹಿಳಾ ದಿನಾಚರಣೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯೆ ಸೌಮ್ಯಾ ರೆಡ್ಡಿ, ಮುಖಂಡರಾದ ಸರಸ್ವತಿ ಬಿ.ಶಿವಣ್ಣ, ಹುಸ್ಕೂರು ಮದ್ದೂರಪ್ಪ, ಎ.ಸತೀಶ್ ಕುಮಾರ್, ಉಲ್ಲಾಸ್ ಬಿ.ಶಿವಣ್ಣ, ಮಮತಾ ರಮೇಶ್, ಶ್ರೀದೇವಿ ಮದ್ದೂರಪ್ಪ, ರತ್ನಮ್ಮ ಶ್ರೀರಾಮುಲು ಇದ್ದರು.
ಸರ್ಜಾಪುರ : ಮಹಿಳೆಯರು ಆರೋಗ್ಯವಾಗಿದ್ದಾಗ ಮಾತ್ರ ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ್ದರಿಂದ ಮಹಿಳೆಯರು ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯೆ ಸೌಮ್ಯಾ ರೆಡ್ಡಿ ಹೇಳಿದರು.
ಸರ್ಜಾಪುರದ ಡಾ. ಅಂಬೇಡ್ಕರ್ ಆಟದ ಮೈದಾನದಲ್ಲಿ ವುಮೆನ್ಸ್ ಸೋಲ್ ಸ್ಪಿರಿಟ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯದ 1.28 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷಿ$್ಮ ಮೂಲಕ 2 ಸಾವಿರ ರೂ., ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಕೈಜೋಡಿಸಿದೆ ಎಂದರು.
ವುಮೆನ್ ಸೋಲ್ ಸ್ಪಿರಿಟ್ ಸಂಸ್ಥೆ ಮುಖ್ಯಸ್ಥೆ ಮಮತಾ ಎಸ್.ವೈ ಶಂಭಯ್ಯ ಮಾತನಾಡಿ, ಸೀರೆ ತೊಟ್ಟು ಮಹಿಳೆಯರು ರ್ಯಾಂಪ್ ಮೂಲಕ ಸಂಸತಿ ಮತ್ತು ಪರಂಪರೆ ಸಾರಿದ್ದಾರೆ. ಗ್ರಾಮೀಣ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರದೇ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಫ್ಯಾಷನ್ ಶೋ, ಬೈಕ್ ರೇಸ್, ಸ್ಯಾರಿ ವಾಕಥಾನ್ ಸ್ಪರ್ಧೆ ಆಯೋಜಿಸಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಭಾಗವಹಿಸಿದ್ದರು. ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಸ್. ವೈ. ಶಂಭಯ್ಯ, ಮುಖಂಡರಾದ ಸುಜಾತಾ ನಾಗರಾಜು, ಡಾ.ರಾಧಿಕಾ ದೇವಿ, ಪೂಜಾ ಚಂದ್ರ, ನಸೀಬ್ ಹುನ್ನೀಸಾ, ಗಾಯತ್ರಿ, ಚಂದ್ರಕಲಾ, ಸೌಮ್ಯಾ ಹರೀಶ್, ದುರ್ಗಾ ದೇವಿ, ಸುಶೀಲಮ್ಮ, ನಾಗವೇಣಿ, ಹೇಮಲತಾ, ಮಮತಾ ಮಂಜುನಾಥ್, ರೇಷ್ಮೆ ಪ್ರಶಾಂತ್, ಸರಸ್ವತಿ ಜನಾರ್ದನ್, ಅಂಬುಜಮ್ಮ, ಗೀತಾ ಲಕ್ಷಿ$್ಮ ಇತರರು ಇದ್ದರು.