ಡಾ.ಅಜಯಸಿಂಗ್​ 
ರಾಜ್ಯ

6617 ಹುದ್ದೆ ಭರ್ತಿಗೆ ಸರ್ಕಾರ ಅನುಮೋದನೆ

ಪ್ರಮುಖ ಮುಖ್ಯಾಂಶಗಳು

  • ಡಾ.ಅಜಯ್​ ಧರ್ಮಸಿಂಗ್​ ಸ್ವಾಗತ
  • ಕಲ್ಯಾಣ ಕರ್ನಾಟಕದ ಶಿಕ್ಷಣ ಸುಧಾರಣೆಗೆ ಸರ್ಕಾರ ಆದ್ಯತೆ
 ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ವಿಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು 6617 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿರುವುದನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯ್​ ಧರ್ಮಸಿಂಗ್​ ಸ್ವಾಗತಿಸಿದ್ದಾರೆ.
ಈ ಹಿಂದೆ ರಾಜ್ಯಾದ್ಯಂತ ಹಂಚಿಕೆ ಮಾಡಲಾಗಿದ್ದ 40,000 ಅತಿಥಿ ಶಿಕ್ಷಕರ ಪೈಕಿ ಕಲಬುರಗಿ ವಿಭಾಗಕ್ಕೆ ಲಭಿಸಿದ ಹುದ್ದೆಗಳು ಹಾಗೂ ಈಗ ಮಂಜೂರಾಗಿರುವ ಹೆಚ್ಚುವರಿ ಹುದ್ದೆಗಳು ಸೇರಿ ಒಟ್ಟಾರೆ 13,324 ಅತಿಥಿ ಶಿಕ್ಷಕರ ಹುದ್ದೆಗಳು ದೊರೆತಂತಾಗಿದೆ. ಇದರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2343 ಹುದ್ದೆಗಳು ಲಭಿಸಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರ ಕೊರತೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಿಸುವಲ್ಲಿ ಶಿಕ್ಷಣವೇ ಅತ್ಯಂತ ಪ್ರಮುಖ ಅಸ ಎಂಬುದನ್ನು ಮನಗಂಡು, ಮಂಡಳಿ ಒಟ್ಟು ಅನುದಾನದಲ್ಲಿ ಶೇ.25 ಭಾಗ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಅರ ಆವಿಷ್ಕಾರ ಯೋಜನೆಯಡಿ ಈಗಾಗಲೇ 748 ಅರ ಮಿತ್ರ ಅತಿಥಿ ಶಿಕರನ್ನು ಯಶಸ್ವಿಯಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಗ್ರಾಮೀಣ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿರಂತರ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 296 ಕರ್ನಾಟಕ ಪಬ್ಲಿಕ್​ ಶಾಲೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದರಲ್ಲಿ 96 ಶಾಲೆಗಳಿಗೆ ಶಿಣ ಇಲಾಖೆ ಅನುಮೋದನೆ ನೀಡಿದ್ದರೆ, 200 ಶಾಲೆಗಳನ್ನು ಮಂಡಳಿಯಿಂದಲೇ ನಿರ್ಮಿಸಲಾಗುತ್ತಿದೆ. ಮಂಡಳಿಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸರ್ಕಾರದ ಶಿಕರ ನೇಮಕದ ಈ ಜಂಟಿ ಹೆಜ್ಜೆಯು ಕಲ್ಯಾಣ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
"

ಕಲ್ಯಾಣ ಕರ್ನಾಟಕ ಭಾಗವು ಶೈಣಿಕವಾಗಿ ಮುನ್ನಡೆಯಬೇಕೆಂಬುದು ಸರ್ಕಾರದ ಆಶಯ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸಲು ಮುಖ್ಯಮಂತ್ರಿಗಳು ಕಲಬುರಗಿ ವಿಭಾಗಕ್ಕೆ ಗರಿಷ್ಠ ಸಂಖ್ಯೆಯ ಅತಿಥಿ ಶಿಕರನ್ನು ಮಂಜೂರು ಮಾಡಿದ್ದಾರೆ. ಈ ಭಾಗದ ಶೈಣಿಕ ಪ್ರಗತಿಗೆ ಹೊಸ ಚೈತನ್ಯ ನೀಡಲಿದೆ.

— > ಡಾ.ಅಜಯ್​ ಧರ್ಮಸಿಂಗ್​, ಅಧ್ಯಕ್ಷ, ಕೆಕೆಆರ್​ಡಿಬಿ