ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂದ ಜಿಲ್ಲಾ, ತಾಲೂಕು ಪದಾಧಿಕಾರಿಗಳಿಗೆ ಡಿಡಿಪಿಐ ಸಿ.ಎಸ್​.ಮುದೋಳ ಪ್ರಮಾಣಪತ್ರ ವಿತರಿಸಿದರು. ಅಶೋಕ ಕೆಂಭಾವಿ, ರಾವೇಂದ್ರ ಅಳ್ಳೊಳ್ಳಿ ಇತರರಿದ್ದರು. 
ರಾಜ್ಯ

ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಫಲಿತಾಂಶ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಸಿ.ಎಸ್​.ಮುದೋಳ ಅಭಿಮತ
  • ಜಿಲ್ಲಾಧ್ಯಕ್ಷರಾಗಿ ರಾವೇಂದ್ರ ಮರು ಆಯ್ಕೆ
ಯಾದಗಿರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಜಿಲ್ಲಾ ಘಟಕ, ಗುರುಮಠಕಲ್​ ಹಾಗೂ ಯಾದಗಿರಿ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಗುರುವಾರ ಇಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಎಸ್​.ಮುದೋಳ ಅವರು ಪ್ರಮಾಣಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಾಥಮಿಕ ಪ್ರೌಢಶಾಲಾ ಶಿಕ್ಷರ ಸಂಘದ ಜಿಲ್ಲಾಧ್ಯಕ್ಷರ ಸಹಕಾರದೊಂದಿಗೆ ಹಾಗೂ ಶಿಕ್ಷರ ಸತತ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಬಂದಿದ್ದು, ಮುಂದಿನ ದಿನದಲ್ಲಿ ಶಿಕ್ಷರ ಯಾವುದೇ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರೌಢಶಾಲಾ ಸಹ ಶಿಕ್ಷರ ಸಂಘ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ, ಸಂಘದಲ್ಲಿ ಒಗ್ಗಟ್ಟಿನ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಡಿಡಿಪಿಐ ಅವರ ವಿಶೇಷ ಕಾಳಜಿ ಮತ್ತು ಎಲ್ಲ ಶಿಕ್ಷಕರ ಶ್ರಮದಿಂದಾಗಿ ಎಸ್​ಎಸ್​ಎಲ್​ಸಿ ಫಲಿತಾಂಶ ಉತ್ತಮವಾಗಿ ಬಂದಿದೆ ಎಂದರು. ನೂತನ ಜಿಲ್ಲಾಧ್ಯಕ್ಷ ರಾವೇಂದ್ರ ಅಳ್ಳೋಳ್ಳಿ ಮಾತನಾಡಿ, ಸಂಘದ ರಾಜ್ಯಾಧ್ಯ ಚಂದ್ರಶೇಖರ ನುಗ್ಲಿ ಅವರ ಸಾರಥ್ಯದಲ್ಲಿ ಶಿಕ್ಷರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ.ಜಿಲ್ಲೆಯಲ್ಲಿ ಶಿಕ್ಷರ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದು, ಉಳಿದ ಪ್ರಮುಖ ಎರಡು ಬೇಡಿಕೆಗಳಾದ ಪದವಿ ಪಡೆದ ಶಿಕ್ಷರಿಗೆ ಒಂದು ವೇತನ ಬಡ್ತಿ ನೀಡುವುದು ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷರ ಹುದ್ದೆಗೆ ಬಡ್ತಿ ನೀಡುವುದು ಸೇರಿದಂತೆಯೇ ಎಲ್ಲ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ನಂತರ ಎಲ್ಲ ಪದಾಧಿಕಾರಿಗಳು ನಗರದ ಗಾಂಧಿ, ಕನಕದಾಸ, ಡಾ.ಅಂಬೇಡ್ಕರ್​ ಹಾಗೂ ಸುಭಾಷ್​ ಚಂದ್ರ ಬೋಸ್​ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು: ರಾವೇಂದ್ರ ಅಳ್ಳೋಳ್ಳಿ (ಜಿಲ್ಲಾಧ್ಯಕ್ಷ), ಪಂಪನಗೌಡ ಪಾಟೀಲ್​ (ಉಪಾಧ್ಯಕ್ಷ), ದೇವರಾಜ್​ ಪಾಟೀಲ್​(ಪ್ರಧಾನ ಕಾರ್ಯದರ್ಶಿ), ನಿಂಗಪ್ಪ ಅಂಗಡಿ(ಖಜಾಂಚಿ) ಹಾಗೂ ಉಮಾದೇವಿ (ಮಹಿಳಾ ಪ್ರತಿನಿಧಿ). ಯಾದಗಿರಿ ತಾಲೂಕು: ಹಣಮಾ ನಾಯಕ್​(ಅಧ್ಯಕ್ಷ), ಮೃತ್ಯಂಜಯ (ಉಪಾಧ್ಯಕ್ಷ), ಬಸಿರ್​ ಅಹ್ಮದ್​ (ಪ್ರಧಾನ ಕಾರ್ಯದರ್ಶಿ), ಕುಮಾರ (ಖಜಾಂಚಿ), ರವಿಚಂದ್ರ (ಸಂ. ಕಾರ್ಯದರ್ಶಿ), ಶಾಂತಮ್ಮ (ಮಹಿಳಾ ಪ್ರತಿನಿಧಿ) ಬಸವರಾಜ ಕೆರುಟಗಿ ಮತ್ತು ಸುಭಾಶರೆಡ್ಡಿ ಪೊಲೀಸ್​ ಪಾಟೀಲ್​ (ಸಂಗೀತ ನಿರ್ದೇಶಕರು)ಗುರುಮಠಕಲ್​: ನಾರಾಯಣ ರೆಡ್ಡಿ ಪೊಲೀಸ್​ ಪಾಟೀಲ್​(ಅಧ್ಯಕ್ಷ), ಮಾಲಿನಿ (ಪ್ರಧಾನ ಕಾರ್ಯದರ್ಶಿ),ಚಂದ್ರಕಾಂತ್​(ಖಜಾಂಚಿ), ನಾಗರೆಡ್ಡಿ ಮಾಲಿ ಪಾಟೀಲ್​ (ಉಪಾಧ್ಯಕ್ಷರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.