Good healGood health requires careth requires care
ತುರುವೇಕೆರೆ: ಮನುಷ್ಯ ನಿತ್ಯ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ತಿಳಿಸಿದರು.
ತಾಲೂಕಿನ ದಂಡಿನಶಿವರ ಹೋಬಳಿ ಹೆಗ್ಗೆರೆಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ವೆಂಕಟೇಶ್ವರ ಸೇವಾ ಟ್ರಸ್ಟ್, ಲಯನ್ಸ್ ಕ್ಲಬ್, ಕಲ್ಪತರು ಚಾರಿಟಬಲ್ ಟ್ರಸ್ಟ್, ಬಿಡಬ್ಲ್ಯು ಲಯನ್ಸ್ ಹಾಸ್ಪಿಟಲ್ ಬೆಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ, ತಾಲೂಕು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಜವರಪ್ಪಸ್ವಾಮಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ರಕ್ತದೊತ್ತಡ, ಶುಗರ್ ಎಚ್.ಬಿಎ1ಸಿ, ಬೋನ್ ಮಿನರಲ್ ಡೆನ್ಸಿಟಿ, ಪಿ.ಎಫ್.ಟಿ, ಥೈರಾಯಿಡ್ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರತಿ ಮನುಷ್ಯನು ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಇಂದಿನ ಆಹಾರ ಶೈಲಿಯಿಂದ ಬಿಪಿ, ಶುಗರ್ ನಂತಹ ಕಾಯಿಲೆಗಳಿಗೆ ಮನುಷ್ಯರು ತುತ್ತಾಗುತ್ತಿದ್ದಾರೆ. ಗ್ರಾಮೀಣ ಭಾಗ ರೈತರು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದವರು ಸಂಘಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೆಂಕಟೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಎಚ್.ಎನ್.ಗಂಗಾಧರಯ್ಯ ಮಾತನಾಡಿ, ವೆಂಕಟೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿಗೆ ದಿ.ಜವರಪ್ಪಸ್ವಾಮಿ ಅವರು ಶ್ರಮಿಸಿದ್ದರು. ಅವರ ಸ್ಮರಣಾರ್ಥ ಈ ದೇವಾಲಯ ಆವರಣದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೇವಾ ಟ್ರಸ್ಟ್ನಿಂದ ಹಲವು ಸೇವಾಕಾರ್ಯಗಳನ್ನು ನಡೆಸಲಾಗುವುದು. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಚ್.ಎನ್.ಪರಮೇಶ್ವರಯ್ಯ ವಹಿಸಿದ್ದರು. ವೆಂಕಟೇಶ್ವರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಡಾ.ಹರ್ಷಿತ್, ಪ್ರಧಾನ ಕಾರ್ಯದರ್ಶಿ ಎಚ್.ಅರ್.ಜಯರಾಮ್, ಕಲ್ಪತರು ಟ್ರಸ್ ಕಾರ್ಯದರ್ಶಿ ಎಚ್.ಆರ್.ರಂಗನಾಥ್, ವೈದ್ಯ ಡಾ.ಎ.ನಾಗರಾಜು, ಕೀಲು ಮತ್ತು ಮೂಳೆ ತಜ್ಞ ಡಾ.ಸುನಿಲ್ ಕುಮಾರ್, ಮಾರ್ಕೇಟಿಂಗ್ ಆಫೀಸರ್ಸ್ ಸುನಿಲ್ ಕುಮಾರ್ ಮತ್ತಿತರರು ಇದ್ದರು.