DK Shivakumar on Ramalinga Reddy resignation 
ರಾಜ್ಯ

'ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ನನ್ನ ಆಪ್ತ ಸ್ನೇಹಿತರು, ಸಮಸ್ಯೆ ಬಗೆಹರಿಸ್ತೇವೆ': ಸಿಎಂ ಡಿಕೆ ಶಿವಕುಮಾರ್​..DK Shivakumar

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದ ಬಿಕ್ಕಟ್ಟು
  • ರಾಮಲಿಂಗಾ ರೆಡ್ಡಿ ನನ್ನ ಆತ್ಮೀಯ ಸ್ನೇಹಿತ ಸಮಸ್ಯೆ ಬಗೆಹರೆಸ್ತೇನೆ ಎಂದ ಸಿಎಂ ಡಿಕೆ ಶಿವಕುಮಾರ್​
  • ರಾಮಲಿಂಗಾ ರೆಡ್ಡಿಯವರ ಜೊತೆ ಚರ್ಚೆ ಮಾಡುತ್ತೇನೆ ಎಂದ ಸಿಎಂ ಡಿಕೆ ಶಿವಕುಮಾರ್​
ಬೆಂಗಳೂರು:  'ರಾಮಲಿಂಗಾ ರೆಡ್ಡಿಯವರು ಕಾಂಗ್ರೆಸ್​ನ ಹಿರಿಯ ನಾಯಕರು. ನನ್ನ ಆತ್ಮೀಯ ಸ್ನೇಹಿತರು ಹೌದು, ಅವರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ' ಎಂದು ಸಿಎಂ ಡಿಕೆ ಶಿವಕುಮಾರ್​ ಅವರು ಶುಕ್ರವಾರ ಮಾತನಾಡಿದರು.
ಇಂದು ಮುಂಜಾನೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರು, ನನಗೆ ತಮ್ಮ ಸಚಿವ ಸಂಪುಟದ ಲ್ಲಿ ಸಚಿವ ಸ್ಥಾನ ನೀಡಿದಕ್ಕೆ ವಂದನೆಗಳು. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುತ್ತೆನೆ. ಆತ್ಮಸಾಕ್ಷಿಗೆ ವಿರುದ್ದವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ..ಆ ಕಾರಣದಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೇನೆ. ಶಾಸಕ ಹಾಗೂ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೆನೆ ಎಂದು ಶಾಕಿಂಗ್​ ನ್ಯೂಸ್​ ಕೊಟ್ಟಿದ್ದರು.  

ನನ್ನ ಸ್ನೇಹಿತ

ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್​ ಅವರು ಮಾತನಾಡಿ, 'ಯಾರು  ಚಿಂತೆ ಮಾಡುವ ಅಗತ್ಯವಿಲ್ಲ. ಹಿರಿಯ ನಾಯಕ, ಅನುಭವಿ ರಾಮಲಿಂಗಾ ರೆಡ್ಡಿಯವರು ನನ್ನ ಸ್ನೇಹಿತ. ನಾವು ಸಚಿವ ಸಂಪುಟದಲ್ಲಿ ಅತ್ಯಂತ ಆತ್ಮೀಯರು. ನಾನು ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆ' ಎಂದರು.

ಸಮಸ್ಯೆ ಬಗೆ ಹರಿಸ್ತೇವೆ

'ಹಳ್ಳಿ ಹಳ್ಳಿಗೂ ತೆರಳಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ರಾಮಲಿಂಗಾ ರೆಡ್ಡಿಯವರಿಗಿರುವ ಕಳವಳ. ಜೊತೆಗೆ ಬೇರೆ ಖಾತೆಯನ್ನು ಕೊಡಿ ಎನ್ನುವ ಆಶಯ ಅವರದ್ದು, ಅವರ ಜೊತೆ ಮಾತನಾಡುತ್ತೇನೆ' ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ಕೊಟ್ಟರು.
ಬೆಂಗಳೂರು ಉಸ್ತುವಾರಿ ಖಾತೆಯ ಆಕಾಂಕ್ಷಿಯಾದ ರಾಮಲಿಂಗಾ ರೆಡ್ಡಿಯವರಿಗೆ  ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್​ ಅವರು ಈ ಹಿಂದೆ ಮಾತು ಕೊಟ್ಟಿದ್ದರು ಎನ್ನಲಾಗಿದೆ, ಈ ವಿಚಾರವಾಗಿಯೇ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಬಿಕೆ ಹರಿಪ್ರಸಾದ್​ ಏನಂದ್ರು?

'ರಾಮಲಿಂಗ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರ ಜೊತೆ ಮಾತಾಡ್ತೀವಿ ತೊಂದರೆ ಇಲ್ಲ . ಕೆಲವು ಸಂದರ್ಭಗಳಲ್ಲಿ ಆ ರೀತಿ ಆಗುತ್ತೆ. ಹಿರಿಯ ಕಾಂಗ್ರೆಸ್ ನಾಯಕ ಅವರ ಜೊತೆ ಚರ್ಚೆ ಮಾಡುತ್ತೇವೆ. ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯ. ಕಾಂಗ್ರೆಸ್ಸಿಗೆ ತೊಂದರೆ ಆಗುವಂತ ಕೆಲಸ ಅವರು ಮಾಡಲ್ಲ. ಎಲ್ಲವನ್ನೂ ಸರಿ ಮಾಡ್ತೀವಿ' ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದರು.