ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಂಕರೆಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅಧಿಕಾರಿ ಮುಜಮಿಲ್ ಪಟೇಲ್, ಶಾಲಿವಾನ್ ಬಿರಾದಾರ, ಅಂಕುಶ ಅರ್ಜುನ್, ದತ್ತಾತ್ರೇಯ, ವಿಶ್ವನಾಥ, ಉದಯಕುಮಾರ ಮುಳೆ, ಫಾದರ್ ವಿಕ್ಟರ್, ಗುರುನಾಥ ಉಮ್ಮರ್ಗೆ ಇತರರಿದ್ದರು.
- ಮುಜಮಿಲ್ ಪಟೇಲ್ ಅಭಿಪ್ರಾಯ
- ಸಸ್ತಾಪುರದಲ್ಲಿ ಬೀಳ್ಕೊಡುಗೆ ಸಮಾರಂಭ
ಬಸವಕಲ್ಯಾಣ: ಪ್ರಾಮಾಣಿಕ ಸೇವೆ ಜೀವನದಲ್ಲಿ ತೃಪ್ತಿ ನೀಡುತ್ತದೆ. ಸೇವಾ ಅವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸ ಕಾರ್ಯಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ. ಹೀಗಾಗಿ ಸೇವಾ ಅವಧಿಯಲ್ಲಿ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಅಗ್ನಿಶಾಮಕ ಇಲಾಖೆ ಜಿಲ್ಲಾ ಅಧಿಕಾರಿ ಮುಜಮಿಲ್ ಪಟೇಲ್ ಹೇಳಿದರು.
ತಾಲೂಕಿನ ಸಸ್ತಾಪುರ ಬಂಗ್ಲಾದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಂಕರೆಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸಿದ ಶಂಕರೆಪ್ಪ ಅವರ ಸೇವೆ ಬೇರೆಯವರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಶಾಲಿವಾನ್ ಬಿರಾದಾರ ಮಾತನಾಡಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಅಂಕುಶ ಅರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿ ಠಾಣಾಧಿಕಾರಿ ದತ್ತಾತ್ರೇಯ, ಅಫಜಲಪುರ ಠಾಣಾಧಿಕಾರಿ ವಿಶ್ವನಾಥ, ಪತ್ರಕರ್ತ ಉದಯಕುಮಾರ ಮುಳೆ, ಫಾದರ್ ವಿಕ್ಟರ್, ಮುಖ್ಯಗುರು ಗುರುನಾಥ ಉಮ್ಮರ್ಗೆ, ರಾಹುಲ ಇತರರಿದ್ದರು. ಸಿಬ್ಬಂದಿ ಶ್ರೀಕರ ಮುಳೆ ನಿರೂಪಣೆ ಮಾಡಿದರು. ಶಂಕರೆಪ್ಪ ಅವರನ್ನು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸನ್ಮಾನಿಸಿ, ಗೌರವಿಸಿದರು.